ಮದ್ಯದ ಜೊತೆ 2 ವಯಾಗ್ರ ಮಾತ್ರೆಗಳನ್ನು ಸೇವಿಸಿ ವ್ಯಕ್ತಿಯೊಬ್ಬ ಸಾವನ್ನಪ್ಪಿರೋ ಘಟನೆ ಮಹಾರಾಷ್ಟ್ರದ ನಾಗ್ಪುರದಲ್ಲಿ ನಡೆದಿದೆ.
ಜರ್ನಲ್ ಆಫ್ ಫೋರೆನ್ಸಿಕ್ ಮತ್ತು ಲೀಗಲ್ ಮೆಡಿಸಿನ್‌ನಲ್ಲಿ ಪ್ರಕಟವಾದ ಅಧ್ಯಯನವನ್ನು ಉಲ್ಲೇಖಿಸಿ, news.au.com ವರದಿ ಮಾಡಿದೆ. ಮೆದುಳಿಗೆ ಆಮ್ಲಜನಕದ ಪೂರೈಕೆ ಕಡಿಮೆಯಾದಾಗ ಸೆರೆಬ್ರೊವಾಸ್ಕುಲರ್ ಹೆಮರೇಜ್‌ನಿಂದ ವ್ಯಕ್ತಿ ಸಾವನ್ನಪ್ಪಿದ್ದಾರೆ ಎಂದು ವರದಿ ಮಾಡಿದೆ.
ಮೃತ ವ್ಯಕ್ತಿ ಸ್ನೇಹಿತೆಯೊಂದಿಗೆ ಹೋಟೆಲ್‌ನಲ್ಲಿ ತಂಗಿದ್ದರು ಎಂದು ತಿಳಿದುಬಂದಿದೆ. ವಯಾಗ್ರ ಎಂಬ ಬ್ರಾಂಡ್‌ನಲ್ಲಿ ಮಾರಾಟವಾಗುವ ಎರಡು 50 ಮಿಲಿ ಗ್ರಾಂ ಸಿಲ್ಡೆನಾಫಿಲ್ ಮಾತ್ರೆಗಳನ್ನು ತೆಗೆದುಕೊಳ್ಳುವ ಮೊದಲು ಇಬ್ಬರೂ ಒಟ್ಟಿಗೆ ಕುಡಿಯುತ್ತಿದ್ದರು ಎಂದು ವರದಿ ಹೇಳಿದೆ.
ಮರುದಿನ ಬೆಳಿಗ್ಗೆ ಆತ ಎದ್ದಾಗ ಆರಾಮಾದಾಯಕ ಸ್ಥಿತಿಯಲ್ಲಿರಲಿಲ್ಲ. ವಾಂತಿ ಮಾಡಲು ಶುರು ಮಾಡಿದ. ಈ ವೇಳೆ ಅವರ ಸ್ನೇಹಿತೆ ವೈದ್ಯರನ್ನು ಸಂಪರ್ಕಿಸಲು ಸೂಚಿಸಿದ್ರೂ ಆ ವ್ಯಕ್ತಿ ಅಲ್ಲಗಳೆದಿದ್ದಾನೆ. ನನಗೆ ಈ ಮೊದಲೂ ಈ ರೀತಿ ಆಗ್ತಿದ್ದಾಗಿ ಹೇಳಿದ ಆತ ವೈದ್ಯರನ್ನು ಆರಂಭದಲ್ಲಿ ಸಂಪರ್ಕಿಸಲಿಲ್ಲ.
ಆತನ ಸ್ಥಿತಿ ಹದಗೆಡಲು ಪ್ರಾರಂಭಿಸಿದ ತಕ್ಷಣ ಅವರನ್ನು ಆಸ್ಪತ್ರೆಗೆ ಸೇರಿಸಲಾಯಿತು. ಆದರೆ ದುರದೃಷ್ಟವಶಾತ್ ಆತ ಆಸ್ಪತ್ರೆಗೆ ಬರುವಷ್ಟರಲ್ಲೇ ದಾರಿಮಧ್ಯೆ ಮೃತಪಟ್ಟಿದ್ದಾರೆ ಎಂದು ಘೋಷಿಸಲಾಯಿತು. ಅಧ್ಯಯನದ ಪ್ರಕಾರ, ಮನುಷ್ಯನು ಸೆರೆಬ್ರೊವಾಸ್ಕುಲರ್ ರಕ್ತಸ್ರಾವದಿಂದ ಮರಣಹೊಂದಿದ್ದಾರೆ.