
ತಮ್ಮ ವ್ಯವಹಾರ ಪಾಲುದಾರರೊಬ್ಬರನ್ನು ಭೇಟಿಯಾಗಲು ಜಬಲ್ಪುರಕ್ಕೆ ತೆರಳಿದ್ದ ಮಹಾರಾಷ್ಟ್ರದ ನಾಗಪುರ ಮೂಲದ ಬಿಜೆಪಿ ಕಾರ್ಯಕರ್ತೆ ಕಳೆದ ಒಂದು ವಾರದಿಂದ ನಾಪತ್ತೆಯಾಗಿದ್ದಾರೆ.
ಬಿಜೆಪಿ ನಾಗಪುರ ಘಟಕದ ಅಲ್ಪಸಂಖ್ಯಾತ ಮೋರ್ಚಾದ ಕಾರ್ಯಕರ್ತೆ 35 ವರ್ಷದ ಸನಾ ಖಾನ್ ಅಲಿಯಾಸ್ ಹಿನಾ ನಾಪತ್ತೆಯಾದವರಾಗಿದ್ದು, ಅವರ ಪತ್ತೆಗಾಗಿ ಪೊಲೀಸರು ತೀವ್ರ ಶೋಧ ಕಾರ್ಯ ನಡೆಸಿದ್ದಾರೆ.
ಮಹಾರಾಷ್ಟ್ರ ಹಾಗೂ ಮಧ್ಯಪ್ರದೇಶ ಪೊಲೀಸರು ತನಿಖೆ ಕೈಗೆತ್ತಿಕೊಂಡಿದ್ದು, ಸನಾ ಖಾನ್ ನಾಪತ್ತೆ ಸಂಬಂಧ ಸಂಶಯಾಸ್ಪದ ವ್ಯಕ್ತಿಯೊಬ್ಬರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ ಎಂದು ಹೇಳಲಾಗಿದೆ. ಸನಾ ಖಾನ್ ತಮ್ಮ ವ್ಯವಹಾರ ಪಾಲುದಾರ ಅಮಿತ್ ಅವರನ್ನು ಭೇಟಿಯಾಗಲು ಆಗಸ್ಟ್ 1 ರಂದು ಜಬಲ್ಪುರಕ್ಕೆ ತೆರಳಿದ್ದರು ಎನ್ನಲಾಗಿದೆ.