ನಾಗಾಲ್ಯಾಂಡ್ ಸಚಿವ ತೆಮ್ಜೆನ್ ಇಮ್ನಾ ಅಲೋಂಗ್ ಆಗಾಗ ಸುದ್ದಿಯಲ್ಲಿರುತ್ತಾರೆ. ಟ್ವಿಟರ್‌ನಲ್ಲಿ ಚಮತ್ಕಾರಿ ಪೋಸ್ಟ್ ಹಂಚಿಕೊಳ್ಳುವ ಮೂಲಕ ಅಲೆಗಳನ್ನೇ ಎಬ್ಬಿಸುತ್ತಾರೆ. ದ್ವಿಚಕ್ರ ವಾಹನದಲ್ಲಿ ಅಲೋಂಗ್ ಮುಂದೆ ಕುಳಿತಿದ್ದರೆ, ಅವರ ಹಿಂದೆ ವ್ಯಕ್ತಿಯೊಬ್ಬರು ಕುಳಿತು ಫೋಟೋಗೆ ಫೋಸ್ ನೀಡಿದ್ದಾರೆ. ಇಬ್ಬರೂ ಹೆಲ್ಮೆಟ್ ಧರಿಸದೆ ಬೈಕ್‌ನಲ್ಲಿ ಕುಳಿತು ನಗುತ್ತಾ ಪೋಸ್ ನೀಡಿದ್ದಾರೆ.
ಅಲೋಂಗ್ ಅವರು ಮುಖ್ಯವಾಗಿ ಸುರಕ್ಷತಾ ಸಂದೇಶದ ಜೊತೆಗೆ ಫೋಟೋವನ್ನು ಹಂಚಿಕೊಂಡರು. ನಾಗಾಲ್ಯಾಂಡ್ ಸಚಿವರ ಈ ಟ್ವೀಟ್ 4.3 ಲಕ್ಷಕ್ಕೂ ಹೆಚ್ಚು ವೀಕ್ಷಣೆಗಳನ್ನು ಪಡೆದುಕೊಂಡಿದೆ. ಹೆಲ್ಮೆಟ್ ಎಲ್ಲಿದೆ ಎಂದು ಜನರು ಹೇಳುತ್ತಾರೆ. ನಿಮಗೆ ಫೋಸ್ ನೀಡಲು ಸ್ಟೈಲ್ ಬೇಕು. ಆದರೆ, ಹೆಲ್ಮೆಟ್ ಇಲ್ಲದೆ ಪ್ರಯಾಣಿಸಬಾರದು ಎಂದು ಅಲೋಂಗ್ ತಮ್ಮ ಟ್ವೀಟ್‌ನಲ್ಲಿ ತಿಳಿಸಿದ್ದಾರೆ.
ಸದ್ಯ, ಈ ಫೋಟೋ ಭಾರಿ ವೈರಲ್ ಆಗಿದ್ದು, 600ಕ್ಕೂ ಹೆಚ್ಚು ರೀಟ್ವೀಟ್ ಗಳನ್ನು ಪಡೆದಿದೆ. ಈ ಫೋಟೋವನ್ನು ಭಾರತದ ಜಾಹೀರಾತುಗಳಿಗಾಗಿ ಹರ್ಲೇಡೆವಿಡ್ಸನ್ ಬಳಸಬಹುದಾಗಿದೆ ಎಂದು ಒಬ್ಬ ಬಳಕೆದಾರರೊಬ್ಬರು ಕಿಚಾಯಿಸಿದ್ದಾರೆ.
ಅಂದಹಾಗೆ ಸಚಿವ ಅಲೋಂಗ್ ಅವರು ತಮ್ಮ ಮನರಂಜಿಸುವ ಮಾತು ಮತ್ತು ಹಾಸ್ಯಕ್ಕಾಗಿ ಸಾಮಾಜಿಕ ಮಾಧ್ಯಮ ಪೋಸ್ಟ್‌ಗಳಿಗೆ ಹೆಸರುವಾಸಿಯಾಗಿದ್ದಾರೆ. ಈ ತಿಂಗಳ ಆರಂಭದಲ್ಲಿ, ನಾಗಾಲ್ಯಾಂಡ್‌ನ ಸುಂದರವಾದ ಬೆಟ್ಟಗಳ ಕೆಳಗೆ ಸ್ಥಳೀಯರೊಂದಿಗೆ ಕೇರಂ ಆಡುತ್ತಿರುವ ಚಿತ್ರವನ್ನು ಅವರು ಹಂಚಿಕೊಂಡಿದ್ದರು.
ಅಷ್ಟೇ ಅಲ್ಲ ತಮ್ಮ ಪೋಸ್ಟ್‌ಗಳಲ್ಲಿ, ಅಲೋಂಗ್ ಅವರು ತಮ್ಮ ರಾಜ್ಯದ ಸೌಂದರ್ಯ ಮತ್ತು ಸಂಸ್ಕೃತಿಯನ್ನು ಪ್ರದರ್ಶಿಸಿದ್ದಾರೆ. ಅಲ್ಲದೆ, ರಸ್ತೆಗಳಲ್ಲಿ ಕಸ ಹಾಕುವುದು ಮತ್ತು ಪರಿಸರಕ್ಕೆ ಉಂಟು ಮಾಡುತ್ತಿರುವ ಹಾನಿಯ ಬಗ್ಗೆ ಬಲವಾದ ಸಂದೇಶವನ್ನು ಸಹ ಹಂಚಿಕೊಂಡಿದ್ದಾರೆ.