alex Certify ತಮ್ಮದೇ ಭಾವಚಿತ್ರವನ್ನು ಹಂಚಿಕೊಂಡ ಸಚಿವ: ಫೋಟೋ ನೋಡಿ ಅಚ್ಚರಿಗೊಳಗಾದ ನೆಟ್ಟಿಗರು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ತಮ್ಮದೇ ಭಾವಚಿತ್ರವನ್ನು ಹಂಚಿಕೊಂಡ ಸಚಿವ: ಫೋಟೋ ನೋಡಿ ಅಚ್ಚರಿಗೊಳಗಾದ ನೆಟ್ಟಿಗರು

ನಾಗಾಲ್ಯಾಂಡ್​: ನಾಗಾಲ್ಯಾಂಡ್ ಸಚಿವ ತೆಮ್ಜೆನ್ ಇಮ್ನಾ ಅಲೋಂಗ್ ಸಾಮಾಜಿಕ ಮಾಧ್ಯಮದ ನೆಚ್ಚಿನ ವ್ಯಕ್ತಿ. ಅವರು ತಮ್ಮ ಅಭಿಮಾನಿಗಳು ಮತ್ತು ಅನುಯಾಯಿಗಳಿಗೆ ಪ್ರಮುಖ ಜೀವನ ಸಲಹೆ ನೀಡುತ್ತಿರುತ್ತಾರೆ. ತಮ್ಮ ರಾಜ್ಯದ ಸೌಂದರ್ಯದ ಕುರಿತು ಪೋಸ್ಟ್​ ಶೇರ್​ ಮಾಡಿಕೊಳ್ಳುತ್ತಾರೆ.

ಇತ್ತೀಚೆಗೆ, ಅವರು ಕಲಾವಿದರೊಬ್ಬರು ತಮ್ಮ ಭಾವಚಿತ್ರವನ್ನು ಪೆನ್ಸಿಲ್‌ನಿಂದ ಮಾಡುವ ವಿಡಿಯೋ ಹಂಚಿಕೊಂಡಿದ್ದಾರೆ. ಈ ವಿಡಿಯೋವನ್ನು ಸಚಿವರು ತಮ್ಮ ಇನ್‌ಸ್ಟಾಗ್ರಾಮ್ ಹ್ಯಾಂಡಲ್‌ನಲ್ಲಿ ಹಂಚಿಕೊಂಡಿದ್ದಾರೆ. ನಾಗಾಲ್ಯಾಂಡ್‌ನ ದಿಮಾಪುರದ ಸ್ವಯಂ ಕಲಿತ ಕಲಾವಿದರೊಬ್ಬರು ಈ ಭಾವಚಿತ್ರವನ್ನು ರಚಿಸಿದ್ದಾರೆ. ಭಾವಚಿತ್ರವು ಸಚಿವರ ಅದ್ಭುತ ಪ್ರತಿಯಂತೆ ಕಾಣುತ್ತದೆ.

ಈ ವಿಡಿಯೋವನ್ನು ಸಚಿವರು ತಮ್ಮ ಇನ್‌ಸ್ಟಾಗ್ರಾಮ್ ಹ್ಯಾಂಡಲ್‌ನಲ್ಲಿ ಹಂಚಿಕೊಂಡಿದ್ದಾರೆ. ಈ ವೀಡಿಯೊವನ್ನು ಹಂಚಿಕೊಂಡಾಗಿನಿಂದ, ಸಾಮಾಜಿಕ ಮಾಧ್ಯಮ ವೇದಿಕೆಯಲ್ಲಿ 17,000 ವೀಕ್ಷಣೆಗಳು ಮತ್ತು ಎರಡು ಸಾವಿರ ಲೈಕ್‌ಗಳನ್ನು ಹೊಂದಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...