ನಾಗಾಲ್ಯಾಂಡ್ನ ಸಚಿವ ತೆಮ್ಜೆನ್ ಇಮ್ನಾ ಅಲೋಂಗ್ ಅವರ ಹಾಸ್ಯಪ್ರಜ್ಞೆಯು ಅಪರಿಮಿತ, ಅದನ್ನು ಸಾಮಾಜಿಕ ಜಾಲತಾಣದಲ್ಲಿ ತಡೆಯಲು ಸಾಧ್ಯವಿಲ್ಲ.
ಸಚಿವ ತಮ್ಮನ್ನು ಜನರು ಸುತ್ತುವರಿದಿರುವ ಚಿತ್ರವನ್ನು ಹಂಚಿಕೊಂಡಿದ್ದಾರೆ. ಅನೇಕರು ಸಚಿವರ ಜತೆ ಸೆಲ್ಫಿ ಕ್ಲಿಕ್ಕಿಸಿಕೊಳ್ಳಲು ಯತ್ನಿಸುತ್ತಿದ್ದರು. ಅವರು ಸ್ವೀಕರಿಸುತ್ತಿರುವ ಜನರ ಗಮನವು ಯಾವ ‘ಸೆಲೆಬ್ರಿಟಿ’ಗಿಂತ ಕಡಿಮೆಯಿಲ್ಲ ಎಂದು ಭಾವಿಸಬಹುದು. ಅವರು ಟ್ವಿಟರ್ನಲ್ಲಿ ಹಂಚಿಕೊಂಡ ಪೋಸ್ಟ್ ಇದುವರೆಗೆ 11 ಸಾವಿರ ಲೈಕ್ಗಳನ್ನು ಹೊಂದಿದೆ.
ವೆೈರಲ್ ಚಿತ್ರವು ಟೆಮ್ಜೆನ್ ಇಮ್ನಾ ಜೊತೆಗೆ ಹಲವಾರು ಇತರರು ಸೆಲ್ಫಿಗಾಗಿ ಸುತ್ತಲೂ ಜಮಾಯಿಸಿರುವುದು ಕಾಣಿಸುತ್ತದೆ. “ನೀವು ಕ್ಯೂಟ್ ಮತ್ತು ಏಕಾಂಗಿಯಾಗಿರುವಾಗ, ನೀವು ಎಲ್ಲೆಡೆ ವೈಯಕ್ತಿಕ ಛಾಯಾಗ್ರಾಹಕರನ್ನು ಆಕರ್ಷಿಸುತ್ತೀರಿ, ಸೆಲೆಬ್ನಂತೆ ಭಾಸವಾಗುತ್ತಿದೆ, ಎಂದು ಅವರು ಬರೆದುಕೊಂಡಿದ್ದಾರೆ. ಜನರು ಅವನ ಮೇಲೆ ಸುರಿಸುತ್ತಿರುವ ಪ್ರೀತಿ ಮತ್ತು ವಾತ್ಸಲ್ಯವನ್ನು ಸಂರ್ಪೂಣವಾಗಿ ಆನಂದಿಸುತ್ತಿರುವುದು ಅವರೇ ಹಂಚಿಕೊಂಡ ಫೋಟೋದಲ್ಲಿ ಕಾಣಿಸುತ್ತದೆ.
ಟ್ವಿಟಿಗರು ಟೆಮ್ಜೆನ್ ಇಮ್ನಾ ಅಲಾಂಗ್ ಉಲ್ಲಾಸದ ಟ್ವೀಟ್ಗೆ ಉತ್ತಮ ಪ್ರತಿಕ್ರಿಯೆ ಹೊಂದಿದ್ದಾರೆ. “ನೀವು ರಾಕ್ಸ್ಟಾರ್” ಎಂದು ಒಬ್ಬರು ಬರೆದರೆ, ಅವರ ಕ್ಯೂಟ್ ಮತ್ತು ಸಿಂಗಲ್ ಪದ ಬಳಕೆಗೆ ಸಾಕಷ್ಟು ಕಾಮೆಂಟ್ ಬಂದಿವೆ.
ಟೆಮ್ಜೆನ್ ಇಮ್ನಾ ಅವರು ಸಾರ್ವಜನಿಕ ಭಾಷಣದಲ್ಲಿ ‘ಸಣ್ಣ ಕಣ್ಣುಗಳನ್ನು’ ಹೊಂದುವ ಪ್ರಯೋಜನಗಳ ಬಗ್ಗೆ ತಮಾಷೆ ಮಾಡುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೆೈರಲ್ ಆದ ನಂತರ ಪ್ರಸಿದ್ಧಿಗೆ ಬಂದರು. ಈ ವಿಡಿಯೋವನ್ನು ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಕೂಡ ಹಂಚಿಕೊಂಡಿದ್ದಾರೆ.