
ನಾಗಾಲ್ಯಾಂಡ್ ಸಚಿವರು ಮೈಕೆಲ್ ಜಾಕ್ಸನ್ ಅವರ ‘ಡೇಂಜರಸ್’ ಹಾಡಿಗೆ ವ್ಯಕ್ತಿಯೊಬ್ಬ ಮಾಡುತ್ತಿರುವ ನೃತ್ಯದ ವೀಡಿಯೊವನ್ನು ಹಂಚಿಕೊಂಡಿದ್ದಾರೆ.
ನಾಗಾಲ್ಯಾಂಡ್‌ನ ಬುಡಕಟ್ಟು ವ್ಯವಹಾರಗಳ ಸಚಿವ ಟೆಮ್ಜೆನ್ ಇಮ್ನಾ ಅಲೋಂಗ್ ಅವರು ಈ ವಿಡಿಯೋ ಶೇರ್ ಮಾಡಿಕೊಂಡಿದ್ದಾರೆ. ಸಾಮಾನ್ಯವಾಗಿ ಸಚಿವರು ಈಶಾನ್ಯ ರಾಜ್ಯದ ಸೌಂದರ್ಯ ಮತ್ತು ಸಂಸ್ಕೃತಿಯ ಒಳನೋಟವನ್ನು ಟ್ವಿಟರ್ ಮೂಲಕ ನೀಡುತ್ತಿರುತ್ತಾರೆ. ಅದರಲ್ಲಿ ಒಂದು ಈ ವಿಡಿಯೋ.
37-ಸೆಕೆಂಡ್‌ಗಳ ಕಿರು ವಿಡಿಯೋದಲ್ಲಿ ವ್ಯಕ್ತಿಯೊಬ್ಬ ನೃತ್ಯವನ್ನು ಸಂಪೂರ್ಣವಾಗಿ ಆನಂದಿಸುತ್ತಿರುವಂತೆ ತೋರುತ್ತದೆ. 1991 ರ ಹಿಟ್ ಹಾಡಿಗೆ ಮೈಕೆಲ್ ಜಾಕ್ಸನ್ ಅವರ ಹೆಜ್ಜೆಗಳನ್ನು ಹಾಕಲು ವ್ಯಕ್ತಿ ಪ್ರಯತ್ನಿಸುತ್ತಿರುವುದನ್ನು ವಿಡಿಯೋದಲ್ಲಿ ಕಾಣಬಹುದು, ‘ಡೇಂಜರಸ್’ ಹಾಡು ಹಿನ್ನೆಲೆಯಲ್ಲಿ ಪ್ಲೇ ಆಗುತ್ತಿದೆ.
ಇದು ಒಂದು ಪ್ರಮುಖ ಜೀವನ ಪಾಠವಾಗಿದೆ, ಅದನ್ನು ಅಭ್ಯಾಸ ಮಾಡುವುದು ಅವಶ್ಯಕ ಎಂದು ನಾವೆಲ್ಲರೂ ಒಪ್ಪಿಕೊಳ್ಳುತ್ತೇವೆ ನಿಮಗೆ ಜೀವನದಲ್ಲಿ ಸಂತೋಷ ಬೇಕಾದರೆ, ಜನರ ಮಾತುಗಳನ್ನು ಗಂಭೀರವಾಗಿ ತೆಗೆದುಕೊಳ್ಳುವುದನ್ನು ನಿಲ್ಲಿಸಿ ಎಂದು ಸಚಿವರು ಶೀರ್ಷಿಕೆ ನೀಡಿದ್ದಾರೆ.