ಹೂವಿನ ಕುಂಡ ಕಳವು: ತಮಾಷೆಯ ಪೋಸ್ಟ್ ಶೇರ್ ಮಾಡಿಕೊಂಡ ನಾಗಾಲ್ಯಾಂಡ್ ಸಚಿವ 02-03-2023 4:46PM IST / No Comments / Posted In: Latest News, India, Live News ಜಿ 20 ಕಾರ್ಯಕ್ರಮಕ್ಕಾಗಿ ಇಟ್ಟ ಹೂವಿನ ಕುಂಡಗಳನ್ನು ಇಬ್ಬರು ವ್ಯಕ್ತಿಗಳು ಕದಿಯುವ ವೀಡಿಯೊ ವೈರಲ್ ಆದ ಒಂದು ದಿನದ ನಂತರ, ಗುರುಗ್ರಾಮ ಪೊಲೀಸರು ಪ್ರಕರಣಕ್ಕೆ ಸಂಬಂಧಿಸಿದಂತೆ ಒಬ್ಬ ವ್ಯಕ್ತಿಯನ್ನು ಬಂಧಿಸಿದ್ದಾರೆ. ಆರೋಪಿಯನ್ನು ಗುರುಗ್ರಾಮ ನಿವಾಸಿ 50 ವರ್ಷದ ಮನಮೋಹನ್ ಎಂದು ಗುರುತಿಸಲಾಗಿದೆ. ಏತನ್ಮಧ್ಯೆ, ಈ ಘಟನೆಯು ಅಂತರ್ಜಾಲದಲ್ಲಿ ವ್ಯಾಪಕವಾಗಿ ಟ್ರೆಂಡ್ ಆಗಿದ್ದು, ಅನೇಕರು ತಮ್ಮ ಕಳವಳವನ್ನು ವ್ಯಕ್ತಪಡಿಸಿದ್ದಾರೆ. ಆನ್‌ಲೈನ್‌ನಲ್ಲಿ ಬಹಳಷ್ಟು ಜೋಕ್‌ಗಳು ಮತ್ತು ಮೀಮ್‌ಗಳು ಕೂಡ ಹರಿದಾಡಿವೆ. ನಾಗಾಲ್ಯಾಂಡ್ ಸಚಿವ ತೆಮ್ಜೆನ್ ಇಮ್ನಾ ಅಲಾಂಗ್ ಅವರು ತಮ್ಮ ಅದ್ಭುತ ಹಾಸ್ಯಪ್ರಜ್ಞೆ ಮತ್ತು ಸಾಮಾಜಿಕ ಮಾಧ್ಯಮದಲ್ಲಿ ಮೋಜಿನ ಶೀರ್ಷಿಕೆಗಳಿಗೆ ಹೆಸರುವಾಸಿಯಾಗಿದ್ದಾರೆ, ಘಟನೆಯ ಬಗ್ಗೆ ತಮ್ಮದೇ ಆದ ರೀತಿಯಲ್ಲಿ ಪ್ರತಿಕ್ರಿಯಿಸಿದ್ದಾರೆ. ವೀಡಿಯೊವನ್ನು ಉಲ್ಲೇಖಿಸಿ-ಟ್ವೀಟ್ ಮಾಡುತ್ತಾ, ಅವರು ಹೆಂಡತಿಯನ್ನು ಸಮಾಧಾನಪಡಿಸಲು ಹೋಗುತ್ತಿದ್ದರು. ಈಗ ದೆಹಲಿ ಪೊಲೀಸರನ್ನು ಸಮಾಧಾನ ಪಡಿಸುತ್ತಿದ್ದಾರೆ ಎಂದಿದ್ದಾರೆ. ಟ್ವೀಟ್ 10,000 ಕ್ಕೂ ಹೆಚ್ಚು ಲೈಕ್‌ಗಳೊಂದಿಗೆ ವೈರಲ್ ಆಗಿದೆ. 830 ಕ್ಕೂ ಹೆಚ್ಚು ರಿಟ್ವೀಟ್‌ಗಳಾಗಿದ್ದು, ಹಲವಾರು ಮಂದಿ ಕಮೆಂಟ್ ಮಾಡುತ್ತಿದ್ದಾರೆ. ಗುರುಗ್ರಾಮ ಪೊಲೀಸರು ಬಂಧಿಸಿದ್ದಾರೆಯೇ ಹೊರತು ದೆಹಲಿ ಪೊಲೀಸರಲ್ಲ ಎಂದು ಕೆಲವರು ತಿಳಿಸಿದ್ದಾರೆ. Biwi को मनाने गया था ! अब Delhi Police को मना रहा हैं 🤭 https://t.co/rk2Raqf7dm — Temjen Imna Along(Modi Ka Parivar) (@AlongImna) March 1, 2023 गुरुग्राम NH-48 पर सजावट के लिए रखे गए फूलों के गमलों को चोरी करने वाले आरोपी मनमोहन को गिरफ्तार कर लिया गया है तथा चोरी किए गमले व चोरी में प्रयोग गाड़ी बरामद की जा चुकी है। — Gurugram Police (@gurgaonpolice) March 1, 2023