ನಾಗಾಲ್ಯಾಂಡ್ನ ಬುಡಕಟ್ಟು ವ್ಯವಹಾರಗಳ ಸಚಿವ ತೆಮ್ಜೆನ್ ಇಮ್ನಾ ಅಲೋಂಗ್ ಅವರು ತಮ್ಮ ಹಾಸ್ಯಮಯದಿಂದಾಗಿ ಆನ್ಲೈನ್ ನಲ್ಲಿ ಬಹಳ ಪ್ರಸಿದ್ಧರಾಗಿದ್ದಾರೆ. ಇದೀಗ 41 ವರ್ಷದ ತೆಮ್ಜೆನ್ ಇಮ್ನಾ ಅವರು ಮತ್ತೆ ಸುದ್ದಿಯಾಗಿದ್ದಾರೆ. ಈ ಬಾರಿ ಅವರು ಜಾನಪದ ನೃತ್ಯಗಾರರೊಂದಿಗೆ ಸಾಂಪ್ರದಾಯಿಕ ನೃತ್ಯಕ್ಕೆ ಹೆಜ್ಜೆ ಹಾಕಿದ್ದಾರೆ.
ಟ್ಸುಂಗ್ರೆಮೊಂಗ್ ಆಚರಣೆಯ ಸಂದರ್ಭದಲ್ಲಿ ಜಾನಪದ ನೃತ್ಯ ಪ್ರದರ್ಶನ ನಡೆದಿದೆ. ಈಶಾನ್ಯ ಜನತೆಯ ನಂಬಿಕೆಯ ಪ್ರಕಾರ, ತ್ಸುಂಗ್ರೆಮೊಂಗ್ ಆರು ದಿನಗಳ ಸುಗ್ಗಿಯ ಹಬ್ಬವಾಗಿದ್ದು, ಇದನ್ನು ಕೃಷಿಯ ಅಂತ್ಯವನ್ನು ಗುರುತಿಸಲು ಆಚರಿಸಲಾಗುತ್ತದೆ. ಈ ಸಮಯದಲ್ಲಿ ಜನರು ದೇವರು ಮತ್ತು ಪೂರ್ವಜರಲ್ಲಿ ಹೇರಳವಾದ ಉತ್ಪನ್ನಗಳಿಗಾಗಿ ಪ್ರಾರ್ಥಿಸುತ್ತಾರೆ. ಈ ಹಬ್ಬದಲ್ಲಿ ಗುಂಪಾಗಿ ನೃತ್ಯ ಮಾಡುತ್ತಾ ಸಂಗೀತ ಪ್ರದರ್ಶನಗಳನ್ನು ನೀಡಲಾಗುತ್ತದೆ.
ಜಾನಪದ ನೃತ್ಯದ ವಿಡಿಯೋವನ್ನು ಹಂಚಿಕೊಂಡ ತೆಮ್ಜೆನ್ ಇಮ್ನಾ ಅವರು, ನೋಡಿ ನಾನು ಕೂಡ ನೃತ್ಯ ಮಾಡಬಲ್ಲೆ. ಸಮೃದ್ಧವಾದ ಸುಗ್ಗಿಯ ಆಶೀರ್ವಾದಕ್ಕಾಗಿ ಆಚರಿಸಲಾಗುವ ಈ ಹಬ್ಬವು ಶ್ರೀಮಂತ ಪರಂಪರೆಯನ್ನು ಉತ್ಸಾಹದಿಂದ ಸಂರಕ್ಷಿಸಲಾಗಿದೆ. ಇದನ್ನು ಯುವ ಪೀಳಿಗೆಗೆ ರವಾನಿಸಲಾಗಿದೆ. ಸ್ಥಳೀಯರೊಂದಿಗೆ ಅದರ ಸಂಸ್ಕೃತಿ ಮತ್ತು ನೃತ್ಯವನ್ನು ಅನ್ವೇಷಿಸಲು ನಾಗಾಲ್ಯಾಂಡ್ಗೆ ಭೇಟಿ ನೀಡಿ ಎಂದು ಅವರು ಶೀರ್ಷಿಕೆ ಬರೆದು ವಿಡಿಯೋವನ್ನು ಪೋಸ್ಟ್ ಮಾಡಿದ್ದಾರೆ. ಈ ವಿಡಿಯೋ ಒಂದು ಲಕ್ಷಕ್ಕೂ ಹೆಚ್ಚು ವೀಕ್ಷಣೆಗಳನ್ನು ಗಳಿಸಿದೆ.