alex Certify ನಾಗರಹಾವನ್ನು ಕೊಂದರೆ ಸೇಡು ತೀರಿಸಿಕೊಳ್ಳಲು ನಾಗಿಣಿ ಬರುವುದು ನಿಜವೇ….? ಇಲ್ಲಿದೆ ಅಸಲಿ ʼಸತ್ಯʼ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ನಾಗರಹಾವನ್ನು ಕೊಂದರೆ ಸೇಡು ತೀರಿಸಿಕೊಳ್ಳಲು ನಾಗಿಣಿ ಬರುವುದು ನಿಜವೇ….? ಇಲ್ಲಿದೆ ಅಸಲಿ ʼಸತ್ಯʼ

ಭಾರತದಾದ್ಯಂತ ನಾಗರ ಪಂಚಮಿಯನ್ನು ಆಚರಿಸಲಾಗುತ್ತಿದೆ. ಈ ದಿನ ಭಕ್ತರು ಶಿವನೊಂದಿಗೆ ಹಾವುಗಳನ್ನು ಪೂಜಿಸುತ್ತಾರೆ. ಈ ದಿನ ನಾಗರ ಹಾವಿಗೆ ಹಾಲುಣಿಸುವ ಸಂಪ್ರದಾಯವಿದೆ. ಆದರೆ ನಾಗರಹಾವು ಹಾಲು ಕುಡಿಯಲು ಇಷ್ಟಪಡುವುದಿಲ್ಲ ಎಂಬ ಸಂಗತಿ ಬಹುತೇಕರಿಗೆ ತಿಳಿದಿಲ್ಲ.

ಆಸ್ಟ್ರೇಲಿಯಾದ ಪ್ರಸಿದ್ಧ ವಿಕ್ಟೋರಿಯಾ ವಸ್ತು ಸಂಗ್ರಹಾಲಯದಲ್ಲಿ ಹಲವಾರು ರೀತಿಯ ಹಾವುಗಳ ಪ್ರಭೇದಗಳಿವೆ. ಎಲ್ಲಾ ಹಾವುಗಳ ಬಗ್ಗೆ ಮಾಹಿತಿಯನ್ನು ಅದರ ವೆಬ್‌ಸೈಟ್‌ನಲ್ಲಿ ನೀಡಲಾಗಿದೆ. ವಿಕ್ಟೋರಿಯಾ ಮ್ಯೂಸಿಯಂನ ವೆಬ್‌ಸೈಟ್‌ನಲ್ಲಿ ಪ್ರಕಟವಾಗಿರುವ ಮಾಹಿತಿಯ ಪ್ರಕಾರ ಹಾವುಗಳು ಯಾವುದೇ ಸಾಮಾಜಿಕ ಬಂಧವನ್ನು ಹೊಂದಿಲ್ಲ ಮತ್ತು ಆಕ್ರಮಣಕಾರರನ್ನು ಗುರುತಿಸಲು ಸಾಧ್ಯವಿಲ್ಲ.

ದಾಳಿಕೋರನನ್ನು ಗುರುತಿಸುವ ಮೂಲಕ ಹಾವು ಸೇಡು ತೀರಿಸಿಕೊಳ್ಳಲು ಸಾಧ್ಯವಿಲ್ಲ ಎನ್ನುತ್ತಾರೆ ತಜ್ಞರು. ಹಾವುಗಳ ಸ್ಮರಣೆಯು ಅಷ್ಟು ವೇಗವಾಗಿಲ್ಲ. ಹಾವಿನ ಕಿವಿಗಳು ಸಾಮಾನ್ಯ ಪ್ರಾಣಿಗಳಂತೆ ಹೊರಭಾಗದಲ್ಲಿಲ್ಲ. ಆದರೆ ನೆಲದಿಂದ ಉಂಟಾಗುವ ಸದ್ದನ್ನು ಆಲಿಸಿ ಅವು ಯಾರೋ ಹತ್ತಿರ ಬರುತ್ತಿದ್ದಾರೆ ಎಂದು ಊಹಿಸಬಹುದು.

ಹಾವುಗಳು ಯಾವಾಗಲೂ ಜೋಡಿಯಾಗಿಯೇ ಇರುತ್ತವೆ ಎಂಬ ನಂಬಿಕೆಯಿದೆ. ಆದರೆ ಇದು ಸಂಪೂರ್ಣವಾಗಿ ತಪ್ಪು. ಪ್ರಣಯದ ಸಂದರ್ಭದಲ್ಲಿ ಮಾತ್ರ  ಎರಡು ಹಾವುಗಳು ಒಟ್ಟಿಗೆ ಕಾಣಿಸಿಕೊಳ್ಳುತ್ತವೆ. ಆದರೆ ಆ ಸಮಯದಲ್ಲಿ ಅವು ಜೋಡಿಯಾಗಿ ನಡೆಯುವುದಿಲ್ಲ. ಹಾವಿನ ತಲೆಯನ್ನು ಕತ್ತರಿಸಿದರೆ ಅದು ಸೂರ್ಯಾಸ್ತದವರೆಗೂ ಜೀವಂತವಾಗಿರುತ್ತದೆ ಎಂಬ ನಂಬಿಕೆ ಕೂಡ ಅನೇಕ ಸ್ಥಳಗಳಲ್ಲಿದೆ. ಆದರೆ ಇದು ನಿಜವಲ್ಲ. ತಲೆ ಕತ್ತರಿಸಿದ ನಂತರ ಹಾವು ಸ್ವಲ್ಪ ಸಮಯದವರೆಗೆ ಜೀವಂತವಾಗಿರುತ್ತದೆ ಮತ್ತು ನಂತರ ಅದು ಸಾಯುತ್ತದೆ. ಸೂರ್ಯಾಸ್ತದವರೆಗೂ ಬದುಕಿರುವುದು ಅಸಾಧ್ಯ. ಒಂದು ಪಾತ್ರೆಯಲ್ಲಿ ಹಾಲನ್ನು ಇಟ್ಟರೆ ಹಾವು ಬಂದು ಕುಡಿಯುತ್ತದೆ ಎಂದು ಹೇಳಲಾಗುತ್ತದೆ. ಆದರೆ ಹಾವುಗಳಿಗೆ ಡೈರಿ ಉತ್ಪನ್ನಗಳನ್ನು ಜೀರ್ಣಿಸಿಕೊಳ್ಳಲು ಕಷ್ಟ. ಹಾಗಾಗಿಯೇ ಅವು ಹಾಲು ಕುಡಿಯಲು ಹಿಂಜರಿಯುತ್ತವೆ. ತೀರಾ ಬಾಯಾರಿಕೆಯಾಗಿದ್ದ ಸಂದರ್ಭದಲ್ಲಿ ಮಾತ್ರ ಹಾಲನ್ನು ಕುಡಿಯಬಹುದು.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...