
ಭರತ್ ಕೃಷ್ಣಮಚಾರಿ ನಿರ್ದೇಶನದ ನಿಖಿಲ್ ಸಿದ್ದಾರ್ಥ ಅಭಿನಯದ ಬಹು ನಿರೀಕ್ಷಿತ ‘ಸ್ವಯಂಭು’ ಚಿತ್ರ ಈಗಾಗಲೇ ಸಾಕಷ್ಟು ನಿರೀಕ್ಷೆ ಮೂಡಿಸಿದ್ದು, ಇನ್ನೇನು ತೆರೆ ಮೇಲೆ ಬರಲು ಸಜ್ಜಾಗಿದೆ. ಇಂದು ನಟಿ ನಭಾ ನಟೇಶ್ ಅವರ ಪೋಸ್ಟರ್ ಬಿಡುಗಡೆಗೊಳಿಸುವ ಮೂಲಕ ಚಿತ್ರತಂಡ ಸ್ವಾಗತ ಕೋರಿದೆ.
ಪಿಕ್ಸೆಲ್ ಸ್ಟುಡಿಯೋಸ್ ಬ್ಯಾನರ್ ನಲ್ಲಿ ಭುವನ್ ಮತ್ತು ಶ್ರೀಕಾರ್ ಈ ಚಿತ್ರಕ್ಕೆ ಬಂಡವಾಳ ಹೂಡಿದ್ದು, ನಿಖಿಲ್ ಸಿದ್ದಾರ್ಥ್ ಸೇರಿದಂತೆ ಸಂಯುಕ್ತ ಮೆನನ್, ಮತ್ತು ನಭಾ ನಟೇಶ್ ಪ್ರಮುಖ ಪಾತ್ರದಲ್ಲಿ ತೆರೆ ಹಂಚಿಕೊಂಡಿದ್ದಾರೆ. ರವಿ ಬಸ್ರೂರ್ ಸಂಗೀತ ಸಂಯೋಜನೆ ನೀಡಿದ್ದು, ಮನೋಜ್ ಪರಮಹಂಸ ಛಾಯಾಗ್ರಹಣವಿದೆ. ವಿಜಯ್ ಕಾಮಿ ಶೆಟ್ಟಿ ಮತ್ತು ಜಿಟಿ ಆನಂದ್ ಸಹ ನಿರ್ದೇಶಕರಾಗಿದ್ದು, ವಾಸುದೇವ್ ಮುನೆಪ್ಪಗರಿ ಡೈಲಾಗ್ ಬರೆದಿದ್ದಾರೆ.