alex Certify ಮಧ್ಯರಾತ್ರಿ ಬಾತ್ ರೂಮಿಗೆ ಕರೆದೊಯ್ದ ಈ ನಟಿ ಪತಿ ಮಾಡಿದ್ದ ಇಂಥಾ ಕೆಲಸ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮಧ್ಯರಾತ್ರಿ ಬಾತ್ ರೂಮಿಗೆ ಕರೆದೊಯ್ದ ಈ ನಟಿ ಪತಿ ಮಾಡಿದ್ದ ಇಂಥಾ ಕೆಲಸ…!

ಕಿರುತೆರೆ ಹಾಗೂ ಸಿನಿಮಾ ಕಲಾವಿದರ ಕೌಟುಂಬಿಕ ದೌರ್ಜನ್ಯದ ಪ್ರಕರಣಗಳು ಇತ್ತೀಚಿಗೆ ಹೆಚ್ಚಾಗ್ತಿದೆ. ಅನೇಕ ಸೆಲೆಬ್ರಿಟಿಗಳು ತಮ್ಮ ನೋವು ತೋಡಿಕೊಂಡಿದ್ದಾರೆ. ಈಗ ಮತ್ತೊಂದು ಪ್ರಕರಣ ಬೆಳಕಿಗೆ ಬಂದಿದೆ. ಏಕ್ತಾ ಕಪೂರ್, ಅಲೌಕಿಕ ಟಿವಿ ಶೋ ನಾಗಿನ್ ನಲ್ಲಿ ಕಾಣಿಸಿಕೊಂಡ ನಟಿ ಅರ್ಜು ಗೋವಿಟ್ರಿಕರ್, ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದಾರೆ.

2019 ರಲ್ಲಿ ಅರ್ಜು, ಪತಿ ಸಿದ್ಧಾರ್ಥ್ ಸಬರ್ವಾಲ್ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿದ್ದರು. ಸಿದ್ಧಾರ್ಥ್ ವಿರುದ್ಧ ವರ್ಲಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ಆತ ಕುಡಿದ ಅಮಲಿನಲ್ಲಿ ಹಲ್ಲೆ ನಡೆಸಿದ್ದಾನೆ ಎಂದಿದ್ದರು. ರಾತ್ರಿ ನಾಲ್ಕು ಗಂಟೆಗೆ ಬಾತ್ರೂಮ್ ಗೆ ಕರೆದುಕೊಂಡು ಹೋಗಿ ಥಳಿಸಿದ್ದಾನೆ ಎಂದಿದ್ದರು. ಎರಡು ವರ್ಷಗಳ ನಂತರ, ಅರ್ಜು ಗೋವಿಟ್ರಿಕರ್ ಈ ಇಡೀ ಪ್ರಕರಣದ ಬಗ್ಗೆ ಬಹಿರಂಗವಾಗಿ ಹೇಳಿದ್ದಾರೆ.

ಮಾಧ್ಯಮದೊಂದಿಗೆ ಮಾತನಾಡಿದ ಅರ್ಜು, 2 ವರ್ಷಗಳ ಹಿಂದೆ ನಡೆದ ಘಟನೆಯನ್ನು ಈಗ ಹೇಳ್ತಿದ್ದೇನೆ. ನನ್ನ ಕತ್ತು ಹಿಡಿದು ಬಾತ್ ರೂಮಿಗೆ ಎಳೆದೊಯ್ದಿದ್ದ. ಮನಸ್ಸಿಗೆ ಬಂದಂತೆ ಥಳಿಸಿದ್ದನೆಂದು ಹೇಳಿದ್ದಾರೆ. ರಷ್ಯಾ ಮಹಿಳೆ ಜೊತೆ ಡೇಟಿಂಗ್ ನಲ್ಲಿದ್ದ ಆತ, ನನ್ನನ್ನು ಕೆಲಸದಾಕೆ ಎನ್ನುತ್ತಿದ್ದ. ಬೆಲ್ಟ್ ನಲ್ಲಿ ಹೊಡೆಯುತ್ತಿದ್ದ. ತುಂಬಾ ಹಿಂಸೆ ನೀಡಿದ್ದಾನೆ. ಆಗ ನನ್ನ ಪರಿಸ್ಥಿತಿಯನ್ನು ಎಲ್ಲರ ಮುಂದೆ ಹೇಳಲು ಇಷ್ಟವಿರಲಿಲ್ಲವೆಂದು ಅರ್ಜು ಹೇಳಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...