
ಮೈಸೂರು: ನಿನ್ನೆ ರಾತ್ರಿ ಮೈಸೂರು ಅರಮನೆಯಿಂದ ದಸರಾ ಆನೆಗಳು ಏಕಾಏಕಿ ಹೊರಗೆ ಓಡಿ ಬಂದು ಆತಂಕ ಸೃಷ್ಟಿಸಿದ ಘಟನೆ ನಡೆದಿದೆ.
ಅರಮನೆಯ ಮುಖ್ಯ ದ್ವಾರದಿಂದ ಧನಂಜಯ ಆನೆ ಕಂಜನ್ ಆನೆಯನ್ನು ಓಡಿಸಿಕೊಂಡು ಬಂದಿದೆ. ಅರಮನೆಯಲ್ಲಿ ಊಟದ ವೇಲೆ ಧನಂಜಯ ಮತ್ತು ಕಂಜನ್ ಆನೆ ನಡುವೆ ಗಲಾಟೆಯಾಗಿದ್ದು, ಕಂಜನ್ ಆನೆಯನ್ನು ಧನಂಜಯ ಆನೆ ಓಡಿಸಿಕೊಂಡು ಬಂದಿದೆ.
ಏಕಾಏಕಿ ಅರಮನೆಯಿಂದ ರಸ್ತೆಗೆ ಕಂಜನ್ ಆನೆ ಓಡಿಬಂದಿದೆ. ಧನಂಜಯ ಆನೆ ಅದನ್ನು ಅಟ್ಟಿಸಿಕೊಂಡು ಬಂದಿದೆ. ಅರಮನೆಯಿಂದ ಆನೆಗಳು ಹೊರಗೆ ಓಡಿ ಬರುವುದನ್ನು ಗಮನಿಸಿದ ವಾಹನ ಸವಾರರು, ಜನ ಚೆಲ್ಲಾಪಿಲ್ಲಿಯಾಗಿದ್ದಾರೆ. ಆದರೆ ಹೆಚ್ಚಿನ ಸಂಖ್ಯೆಯ ಜನರು ಇರಲಿಲ್ಲ. ಕೂಡಲೇ ಮಾವುತರು ಕಾರ್ಯಾಚರಣೆ ನಡೆಸಿ ಆನೆಗಳನ್ನು ನಿಯಂತ್ರಿಸಿದ್ದಾರೆ.