ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾ ಜಂಬೂಸವಾರಿಯನ್ನು ಸಮೀಪದಿಂದ ವೀಕ್ಷಿಸಲು ಅವಕಾಶ ಕಲ್ಪಿಸಲು ‘ಗೋಲ್ಡ್ ಕಾರ್ಡ್’ ಮಾರಾಟ ಆರಂಭವಾಗಿದ್ದು, 4,999 ರೂಪಾಯಿ ದರ ನಿಗದಿಪಡಿಸಲಾಗಿದೆ.
www.mysoredasara.gov.in ವೆಬ್ಸೈಟ್ ಮೂಲಕ ಒಂದು ಬಾರಿಗೆ ಗರಿಷ್ಠ ಎರಡು ಗೋಲ್ಡ್ ಕಾರ್ಡ್ ಖರೀದಿಸಬಹುದು. ಆನ್ಲೈನ್ ನಲ್ಲಿ ಹಣ ಪಾವತಿಸಿ ದೃಢೀಕರಿಸಿದ ನಂತರ ಪ್ರವಾಸಿಗರು ಮೈಸೂರಿನ ಕೆ.ಎಸ್.ಟಿ.ಡಿ.ಸಿ. ಮಯೂರ ಹೋಟೆಲ್ ಹತ್ತಿರ ಬೆಳಿಗ್ಗೆ 11 ರಿಂದ ಸಂಜೆ 5:30ರ ವರೆಗೆ ಗೋಲ್ಡ್ ಕಾರ್ಡ್ ಪಡೆದುಕೊಳ್ಳಬಹುದು.
ಕಾರ್ಡ್ ಪಡೆಯುವ ಸಂದರ್ಭದಲ್ಲಿ ಹಣ ಪಾವತಿ ನಂತರ ಸ್ವೀಕೃತವಾಗುವ ಇ-ಮೇಲ್ ಪ್ರತಿ ಅಥವಾ ಯಾವುದಾದರೂ ಐಡಿ ಹಾಜರುಪಡಿಸಬೇಕು. ಈ ಗೋಲ್ಡ್ ಕಾರ್ಡ್ ನಿಂದ ಜಂಬೂಸವಾರಿ, ಪಂಜಿನ ಕವಾಯತು, ಅರಮನೆ, ಮೃಗಾಲಯ, ಚಾಮುಂಡೇಶ್ವರಿ ದೇವಸ್ಥಾನ, ಫಲ ಪುಷ್ಪ ಪ್ರದರ್ಶನ, ವಸ್ತು ಪ್ರದರ್ಶನ, ಫಿಲೋಮಿನಾ ಚರ್ಚ್, ಕೆ.ಆರ್.ಎಸ್.ಗೆ ಭೇಟಿ ನೀಡಬಹುದಾಗಿದೆ.