
ಮೈಸೂರು: ರಸ್ತೆ ಪಕ್ಕದ ವಿದ್ಯುತ್ ಕಂಬಕ್ಕೆ ತ್ರಿಚಕ್ರ ಬೈಕ್ ಡಿಕ್ಕಿಯಾಗಿ ಇಬ್ಬರು ಸಾವನ್ನಪ್ಪಿದ್ದಾರೆ. ಸರಗೂರು ತಾಲೂಕಿನ ಶಾಂತಿನಿವಾಸ ಗ್ರಾಮದ ಬಳಿ ಘಟನೆ ನಡೆದಿದೆ.
ಮೈಸೂರು ಜಿಲ್ಲೆ ಸರಗೂರು ತಾಲೂಕಿನ ಶಾಂತಿನಿವಾಸ ಗ್ರಾಮದ ಬಳಿ ಅಪಘಾತ ಸಂಭವಿಸಿದ್ದು, ಕಲ್ಲಹಳ್ಳಹಾಡಿಯ ನಾಗಮ್ಮ ಮತ್ತು ವಿಜಯೇಂದ್ರ ಮೃತಪಟ್ಟವರು ಎಂದು ಹೇಳಲಾಗಿದೆ. ಮತ್ತೊಬ್ಬ ಬೈಕ್ ಸವಾರ ಕಾಳ ಎಂಬಾತನಿಗೆ ಗಾಯಗಳಾಗಿವೆ. ಸುಗೆವಾಡಿಹಾಡಿ ದೇವಾಲಯಕ್ಕೆ ಹೋಗಿ ಬರುತ್ತಿದ್ದಾಗ ಅಪಘಾತ ಸಂಭವಿಸಿದೆ. ಸರಗೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.