ಮೈಸೂರು: ಕುಡಿತದ ದಾಸನಾಗಿದ್ದ ವ್ಯಕ್ತಿಯೊಬ್ಬ ಹಣ ನೀಡಲಿಲ್ಲ ಎಂದು ಒಡಹುಟ್ಟಿದ ತಂಗಿಯ ಮಗುವನ್ನೆ ಹತ್ಯೆಗೈದ ಹೃದಯವಿದ್ರಾವಕ ಘಟನೆ ಮೈಸೂರಿನಲ್ಲಿ ನಡೆದಿದೆ.
ಮೈಸೂರಿನ ಕನಕಗಿರಿಯ 30 ವರ್ಷದ ರಾಜು ಆರೋಪಿ. ಕುಡಿತಕ್ಕೆ ಹಣ ಕೊಡಲಿಲ್ಲ ಎಂಬ ಕಾರಣಕ್ಕೆ ತಂಗಿಯ 8 ತಿಂಗಳ ಮಗುವನ್ನು ಎತ್ತಿ ಗೋಡಗೆ ಅಪ್ಪಳಿಸಿದ್ದಾನೆ. ಮಗು ಸ್ಥಳದಲ್ಲೇ ಸಾವನ್ನಪ್ಪಿದೆ. ಘಟನೆ ಬಳಿಕ ಆರೋಪಿ ರಾಜು ಪರಾರಿಯಾಗಿದ್ದಾನೆ.
ವಿದ್ಯಾರಣ್ಯಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.