ಬ್ರಹ್ಮಾಂಡದಲ್ಲಿ ಅದೆಷ್ಟೋ ರಹಸ್ಯಗಳು ಅಡಗಿವೆ. ನಮ್ಮ ಕಲ್ಪನೆಗೂ ನಿಲುಕದಂತ ಅನೇಕ ಸಂಗತಿಗಳು ಬ್ರಹ್ಮಾಂಡದಲ್ಲಿ ಘಟಿಸುತ್ತಲೇ ಇರುತ್ತೆ. ಈಗ, ಅಂತಹದ್ದೇ ಘಟನೆಯೊಂದು ಇತ್ತೀಚೆಗೆ ಗುಜರಾತ್‌ನಲ್ಲಿ ನಡೆದಿದೆ. ಅದಕ್ಕೆ ಸಾಕ್ಷಿಯಾಗಿ ಸಿಕ್ಕಿದ್ದು, ಫುಟ್ಬಾಲ್ ಆಕಾರದ ಮೂರು ನಿಗೂಢ ವಸ್ತುಗಳು.
ಗುಜರಾತ್‌ನ ಆನಂದ್ ಜಿಲ್ಲೆಯಲ್ಲಿ ಒಮ್ಮಿಂದೊಮ್ಮೆ ಆಗಸದೆತ್ತರದಿಂದ ಫುಟ್ಬಾಲ್ ಆಕಾರದ ಮೂರು ವಿಚಿತ್ರ ವಸ್ತುಗಳು ಬಿದ್ದಿವೆ. ಅದು ಏನು..? ಎಲ್ಲಿಂದ ಬಂದು ಬಿತ್ತು ಅನ್ನೊದು ಯಾರಿಗೂ ಗೊತ್ತಿರಲಿಲ್ಲ. ಅವುಗಳ ಆಕಾರ, ಹಾಗೂ ಆ ವಸ್ತುವಿನ ಮೇಲೆ ಮೆತ್ತಿರುವ ಮಣ್ಣನ್ನು ನೋಡಿದಾಗ ಅವು ಬಾಹ್ಯಾಕಾಶದಿಂದಲೇ ಬಿದ್ದಿರಬಹುದು ಅನ್ನೊ ಅನುಮಾನ ಬಂದಿದೆ. ತಕ್ಷಣವೇ ಸ್ಥಳಕ್ಕೆ ಧಾವಿಸಿ ಬಂದ ವಿಧಿ ವಿಜ್ಞಾನ ಪ್ರಯೋಗಾಲಯದ ವಿಜ್ಞಾನಿಗಳು ಈ ವಸ್ತುವನ್ನ ಪರೀಕ್ಷಿಸಿದ್ದಾರೆ. ವರದಿ ಬಂದ ಬಳಿಕವಷ್ಟೇ ಇದು ಏನು ಅನ್ನೊದು ಸ್ಪಷ್ಟವಾಗಲಿದೆ.
ಗ್ರಾಮಸ್ಥರು ಇದು ಆಕಾಶದಿಂದ ನೇರವಾಗಿ ಇಲ್ಲಿ ಬಿದ್ದಿರಬಹುದು ಅಂತ ಹೇಳುತ್ತಿದ್ದಾರೆ. ಸಂಜೆ ಸುಮಾರು 4.45ಕ್ಕೆ ಭಲೇಜ್, ಖಂಬೋಲ್ಡ್ ಮತ್ತು ರಾಮ್ಪುರದಲ್ಲಿಯೂ ಇದೇ ರೀತಿ ಫುಟ್ಬಾಲ್ ಆಕಾರದ ಅನುಮಾನಾಸ್ಪದ ವಸ್ತುಗಳು ಬಿದ್ದಿರೋದು ಕಂಡು ಬಂದಿದೆ. ಈ ಮೂರು ಪ್ರದೇಶಗಳ ಅಂತರ ಸುಮಾರು 15 ಕಿಲೋಮೀಟರ್ನಷ್ಟು ದೂರವಿದೆ. ಏಕ ಕಾಲದಲ್ಲಿ ಈ ಮೂರೂ ಪ್ರದೇಶದಲ್ಲಿ ಈ ವಸ್ತುಗಳು ಕಂಡು ಬಂದಿದ್ದು, ಇನ್ನಷ್ಟು ಅನುಮಾನಕ್ಕೆ ಕಾರಣವಾಗಿದೆ..
SSLC ಪರೀಕ್ಷೆ ಬರೆದು ಫಲಿತಾಂಶದ ನಿರೀಕ್ಷೆಯಲ್ಲಿರುವ ವಿದ್ಯಾರ್ಥಿಗಳಿಗೊಂದು ಮುಖ್ಯ ಮಾಹಿತಿ; ಮೂರು ದಿನಗಳಲ್ಲೇ ಸಿಗುತ್ತೆ ಉತ್ತರ ಪತ್ರಿಕೆಯ ಪ್ರತಿ…!
ಕೆಲವರು ಈ ಲೋಹದ ಚೆಂಡು ಉಪಗ್ರಹದ ಅವಶೇಷಗಳಾಗಿರಬಹುದು ಅಂತ ಹೇಳುತ್ತಿದ್ದಾರೆ. ಆದರೆ ಇದರ ಬಗ್ಗೆ ಈಗಲೇ ಏನೂ ಸ್ಪಷ್ಟವಾಗಿ ಹೇಳಲು ಸಾಧ್ಯವಿಲ್ಲ, ಅಂತ ಆನಂದ್ ಜಿಲ್ಲೆಯ ಪೊಲೀಸ್ ಅಧೀಕ್ಷಕ ಅಜಿತ್ ರಜಿಯಾನ್ ಹೇಳಿದ್ದಾರೆ. ಈ ನಿಗೂಢವಾದ ವಸ್ತುವಿನ ಬಗ್ಗೆ ಜನರು ಚಿತ್ರ-ವಿಚಿತ್ರ ಕಥೆ ಕಟ್ಟುತ್ತಿದ್ದಾರೆ. ಆದರೆ ಇದರಿಂದ ಯಾವುದೇ ಪ್ರಾಣಹಾನಿಯಂತೂ ಆಗಿಲ್ಲ. ಆದರೂ ಈ ಲೋಹದ ಚೆಂಡಿನಾಕಾರದ ವಸ್ತು ಏನು ಅನ್ನೊದು ವಿಧಿ ವಿಜ್ಞಾನ ಪ್ರಯೋಗಾಲಯದ ವರದಿ ಬಂದ ಮೇಲೆಯೇ ಸ್ಪಷ್ಟವಾಗಲಿದೆ..