
ಇತ್ತೀಚಿಗೆ ಮೆಕ್ಸಿಕನ್ ನಗರದಲ್ಲಿ ಕೆಲವು ನಿಗೂಢ ವ್ಯಕ್ತಿಗಳು ಕಳ್ಳರನ್ನು ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ. ಕಳ್ಳರಿಗೆ ಜೋಕರ್, ಕಾಮಿಕ್ಸ್ ವಿಲನ್‌ನಂತೆ ತಮ್ಮ ಮುಖ, ದೇಹಕ್ಕೆ ಬಣ್ಣ ಬಳಿಯಲಾಗಿದ್ದು, ಕಂಬಕ್ಕೆ ಕಟ್ಟಿ ಹಾಕಿರುವ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.
2025ರ ವೇಳೆಗೆ ಪೂರ್ಣಗೊಳ್ಳಲಿದೆ ವಿಶ್ವದ ಮೊದಲ ತೇಲುವ ನಗರ: ಇಂಟ್ರಸ್ಟಿಂಗ್ ಆಗಿದೆ ಇದರ ವಿಶೇಷತೆ…!
ಹೌದು, ಈಶಾನ್ಯ ಮೆಕ್ಸಿಕೋದಲ್ಲಿ ಈ ಘಟನೆ ನಡೆದಿದೆ. ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡ ಫೋಟೋಗಳು ಮತ್ತು ವಿಡಿಯೋಗಳು, ದರೋಡೆಯ ಪ್ರಯತ್ನಗಳನ್ನು ವ್ಯಕ್ತಿ ಅಥವಾ ಅಜ್ಞಾತ ವ್ಯಕ್ತಿಗಳ ಗುಂಪು ವಿಫಲಗೊಳಿಸಿದೆ ಎಂಬುದನ್ನು ಸೂಚಿಸುತ್ತಿದೆ.
ರಿಯೊ ಬ್ರಾವೊ ನಗರದಲ್ಲಿ ಮಹಿಳಾ ಪಾದಚಾರಿಗಳ ಪರ್ಸ್ ಕದಿಯಲು ಯತ್ನಿಸಿದ ಪುರುಷ ಮತ್ತು ಮಹಿಳೆಯ ಫೋಟೋವನ್ನು ಟ್ವಿಟ್ಟರ್‌ನಲ್ಲಿ ಹಂಚಿಕೊಳ್ಳಲಾಗಿದೆ. ಈ ಇಬ್ಬರು ಶಂಕಿತರನ್ನು ಗಡಿ ನಗರದಲ್ಲಿ ಡಕ್ಟ್ ಟೇಪ್‌ನಿಂದ ಕಟ್ಟಲಾಗಿತ್ತು. ಅಲ್ಲದೆ ತಾನು ಕಳ್ಳ ಎಂದು ಪುರುಷನ ದೇಹ ಹಾಗೂ ಮಹಿಳೆಯ ತಲೆಯ ಮೇಲೆ ಪೇಯಿಂಟ್ ನಿಂದ ಬರೆಯಲಾಗಿತ್ತು. ಪೊಲೀಸರ ಗಸ್ತು ವಾಹನ ಇವರಿಬ್ಬರನ್ನು ಗಮನಿಸಿ, ಕೋಳ ತೊಡಿಸಿದೆ.
ಮತ್ತೊಂದು ಘಟನೆಯಲ್ಲಿ, ಪುರುಷರ ಗುಂಪು ಪರಸ್ಪರ ಕೈಗಳನ್ನು ಕಟ್ಟಿಕೊಂಡು ಸಾಲಿನಲ್ಲಿ ಶರ್ಟ್ ಇಲ್ಲದೆ ನಡೆಯುತ್ತಿರುವುದು ಕಂಡುಬಂದಿದೆ. ಅವರ ಮುಖಗಳನ್ನು ಕೂಡ ಜೋಕರ್‌ನಂತೆ ಚಿತ್ರಿಸಲಾಗಿತ್ತು. ಆದರೆ, ಕಳ್ಳರನ್ನು ಹಿಡಿಯುವಲ್ಲಿ ಯಶಸ್ವಿಯಾದವರ ಬಗ್ಗೆ ಮಾತ್ರ ಮಾಹಿತಿ ಲಭ್ಯವಾಗಿಲ್ಲ.