alex Certify BIG NEWS: ನಿಗೂಢ ಜ್ವರಕ್ಕೆ 8 ಮಕ್ಕಳು ಬಲಿ…..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ನಿಗೂಢ ಜ್ವರಕ್ಕೆ 8 ಮಕ್ಕಳು ಬಲಿ…..!

ಹರಿಯಾಣದಲ್ಲಿ ಆತಂಕಕ್ಕೆ ಕಾರಣವಾಗಿರುವ ನಿಗೂಢ ಜ್ವರವು ಪಲ್ವಾರ್​ ಜಿಲ್ಲೆಯ ಹಾಥಿನ್​ ನಗರದಲ್ಲಿ ಕಳೆದ 10 ದಿನಗಳಲ್ಲಿ 8 ಮಕ್ಕಳ ಜೀವವನ್ನು ಬಲಿ ಪಡೆದಿದೆ. ಚಿಲ್ಲಿ ಗ್ರಾಮದ ನಿವಾಸಿಗಳ ಮಕ್ಕಳು ಡೆಂಗ್ಯೂ ಜ್ವರದಿಂದ ಸಾವನ್ನಪ್ಪಿದ್ದಾರೆ ಎಂದು ಹೇಳುತ್ತಿದ್ದಾರೆ. ಆದರೆ ಆರೋಗ್ಯ ಇಲಾಖೆ ಮಾತ್ರ ಈ ಬಗ್ಗೆ ಯಾವುದೇ ಸ್ಪಷ್ಟ ಮಾಹಿತಿಯನ್ನು ನೀಡಿಲ್ಲ. ಸುಮಾರು 50-60 ಮಕ್ಕಳಲ್ಲಿ ಈ ಮಾದರಿಯ ಜ್ವರ ಕಾಣಿಸಿಕೊಂಡಿದೆ ಹಾಗೂ ಎಲ್ಲರನ್ನೂ ವಿವಿಧ ಖಾಸಗಿ ಆಸ್ಪತ್ರೆಗಳಿಗೆ ದಾಖಲು ಮಾಡಲಾಗಿದೆ.

ಜ್ವರದಿಂದಾಗಿ 8 ಮಕ್ಕಳ ಸಾವು ಆರೋಗ್ಯ ಇಲಾಖೆಗೆ ದೊಡ್ಡ ಆಘಾತವನ್ನೇ ನೀಡಿದೆ. ಡೆಂಗ್ಯೂ, ಮಲೆರಿಯಾ, ಕೋವಿಡ್​ 19 ಸೇರಿದಂತೆ ವಿವಿಧ ಕಾಯಿಲೆಯ ಬಗ್ಗೆ ಅಧ್ಯಯನ ನಡೆಸುವ ಸಲುವಾಗಿ ಗ್ರಾಮಕ್ಕೆ ತೆರಳಿದ ಆರೋಗ್ಯ ಇಲಾಖೆ ತಂಡವು ಸ್ಯಾಂಪಲ್​ಗಳನ್ನು ಸಂಗ್ರಹಿಸಿದೆ.

ಇತ್ತ 8 ಮಕ್ಕಳ ಸಾವಿಗೆ ಸರ್ಕಾರದ ನಿರ್ಲಕ್ಷ್ಯವೇ ಕಾರಣ ಎಂದು ಗ್ರಾಮಸ್ಥರು ಆರೋಪಿಸುತ್ತಿದ್ದಾರೆ. ಆರೋಗ್ಯ ಇಲಾಖೆ ಸರಿಯಾದ ಸಮಯಕ್ಕೆ ಅಲರ್ಟ್​ ಆಗಿದ್ದರೆ ಮಕ್ಕಳ ಜೀವ ಉಳಿಯುತ್ತಿತ್ತು ಎಂಬುದು ಗ್ರಾಮಸ್ಥರ ವಾದವಾಗಿದೆ. ಈ ನಿಗೂಢ ಜ್ವರವು ಮಕ್ಕಳು ಮಾತ್ರವಲ್ಲದೇ ಹಿರಿಯರನ್ನು ಕಾಡುತ್ತಿದ್ದು ಚಿಲ್ಲಿ ಗ್ರಾಮದ ಜನತೆ ಆತಂಕದಲ್ಲೇ ದಿನದೂಡುವಂತಾಗಿದೆ.

ಚಿಲ್ಲಿ ಗ್ರಾಮದಲ್ಲಿ 4000 ಜನಸಂಖ್ಯೆ ಇದ್ದರೂ ಸಹ ಯಾವುದೇ ಸರ್ಕಾರಿ ಆರೋಗ್ಯ ಕೇಂದ್ರಗಳಿಲ್ಲ. ಅಲ್ಲದೇ ಆರೋಗ್ಯ ಇಲಾಖೆ ಅಧಿಕಾರಿಗಳು ಚಿಲ್ಲಿಗೆ ಭೇಟಿ ನೀಡದೇ ವರ್ಷಗಳೇ ಕಳೆದಿವೆ ಎಂದು ಗ್ರಾಮಸ್ಥರು ದೂರಿದ್ದಾರೆ. ಇದರ ಜೊತೆಯಲ್ಲಿ ಇಲ್ಲಿನ ಗ್ರಾಮಸ್ಥರು ಕಲುಷಿತ ನೀರು ಸೇವನೆ ಮಾಡುತ್ತಿರೋದು ಕೂಡ ಜ್ವರಕ್ಕೆ ಕಾರಣವಿರಬಹುದೇ ಎಂಬ ಶಂಕೆಗೆ ಕಾರಣವಾಗಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...