ಉತ್ತರ ಭಾರತದ ಕೆಲ ರಾಜ್ಯಗಳಲ್ಲಿ ಆಕಾಶದಲ್ಲಿ ನಿಗೂಢ ದೀಪಗಳು ಕಾಣಿಸಿಕೊಂಡಿದ್ದು ಇದನ್ನು ನೋಡಿದ ಅನೇಕರು ಗೊಂದಲಕ್ಕೀಡಾಗಿದ್ದಾರೆ. ಆದರೆ ಇದು ಉಪಗ್ರಹ ಎಂದು ರಕ್ಷಣಾ ಮೂಲಗಳು ಅಧಿಕೃತ ಮಾಹಿತಿ ನೀಡಿವೆ.
ಸೋಶಿಯಲ್ ಮೀಡಿಯಾದಲ್ಲಿ ರಾತ್ರಿಯ ಸಮಯದಲ್ಲಿ ಆಕಾಶದಲ್ಲಿ ಗಾಢವಾದ ಬೆಳಕೊಂದು ಬೆಳಗುತ್ತಿರುವ ದೃಶ್ಯಗಳು ವೈರಲ್ ಆಗಿದೆ. ಇದು ಎಲೋನ್ ಮಸ್ಕ್ ನೇತೃತ್ವದ ಸ್ಟಾರ್ ಲಿಂಕ್ ಉಪಗ್ರಹಗಳು ಎಂದು ಅನೇಕ ಮಾಧ್ಯಮಗಳು ವರದಿ ಮಾಡಿವೆ. ಪಂಜಾಬ್ ಸೇರಿದಂತೆ ಉತ್ತರ ಭಾರತದ ಕೆಲ ರಾಜ್ಯಗಳಲ್ಲಿ ಈ ಗಾಢ ಬೆಳಕು ಕಾಣಿಸಿಕೊಂಡಿದೆ.
ಎಲಾನ್ ಮಸ್ಕ್ರ ಏರೋಸ್ಪೇಸ್ ಕಂಪನಿ ಸ್ಪೇಸ್ ಎಕ್ಸ್ ಇಂದು ಫ್ಲೋರಿಡಾದ ಕೇಪ್ ಕೆನಾವೆರಲ್ ಬಾಹ್ಯಾಕಾಶ ಪಡೆದ ನಿಲ್ದಾಣದಿಂದ 48 ಸ್ಟಾರ್ಲಿಂಕ್ ಇಂಟರ್ನೆಟ್ ಉಪಗ್ರಹಗಳು ಹಾಗೂ ಎರಡು ಬ್ಲ್ಯಾಕ್ ಸ್ಕೈ ಉಪಗ್ರಹಗಳನ್ನು ಹೊತ್ತ ಫಾಲ್ಕೋನ್ 9 ರಾಕೆಟ್ನ್ನು ಯಶಸ್ವಿಯಾಗಿ ಉಡಾವಣೆ ಮಾಡಿದೆ.