ಲಕ್ನೋ: ಸೋಮವಾರ ಸಂಜೆ ಲಕ್ನೋದ ಆಕಾಶದಲ್ಲಿ ದೀಪಗಳ ಸಾಲು ಕಾಣಿಸಿಕೊಂಡ ನಂತರ ಲಕ್ನೋ ನಿವಾಸಿಗಳು ದಿಗ್ಭ್ರಮೆಗೊಂಡಿದ್ದಾರೆ.
ಸರಳ ರೇಖೆಯಲ್ಲಿ ಕಾಣಿಸುತ್ತಿದ್ದ ನಿಗೂಢ ದೀಪಗಳು ಪ್ರಖರವಾದ ಬೆಳಕನ್ನು ಸೂಸುತ್ತಾ ನಿಧಾನಗತಿಯಲ್ಲಿ ಚಲಿಸುತ್ತಿರುವಂತೆ ತೋರುತ್ತಿತ್ತು. ಸ್ಥಳೀಯರು ಮಿಟುಕಿಸುವ ದೀಪಗಳನ್ನು ತಮ್ಮ ಕ್ಯಾಮೆರಾಗಳಲ್ಲಿ ಸೆರೆಹಿಡಿದು ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ವೀಡಿಯೊಗಳನ್ನು ಹಂಚಿಕೊಂಡಿದ್ದಾರೆ.
ಅನೇಕರು ಇದರ ಮೂಲವನ್ನು ಊಹಿಸುವುದರೊಂದಿಗೆ, ಕೆಲವರು ಇದನ್ನು ಆಕಾಶದ ಘಟನೆ ಎಂದು ಕಂಡುಕೊಂಡರೆ ಇತರರು ಇದನ್ನು ‘ವಿಚಿತ್ರ’ ಎಂದು ಪೋಸ್ಟ್ ಮಾಡಿದ್ದಾರೆ. ಟ್ವಿಟ್ಟರ್ನಲ್ಲಿ ಕೆಲವರು ಇದು ಗುರುತಿಸಲಾಗದ ಹಾರುವ ವಸ್ತು(UFO) ಆಗಿರಬಹುದು ಎಂದು ಹೇಳಿದ್ದಾರೆ.
ಇಂದು ಸಂಜೆ 7:15 ರ ಸುಮಾರಿಗೆ ನಾನು ಒಂದು ನಿಗೂಢ ವಸ್ತುವಿನ ಬೆಳಕಿನಿಂದ ತುಂಬಿರುವ ರೈಲು ಆಕಾಶದಲ್ಲಿ ಪ್ರಯಾಣಿಸುತ್ತಿದೆ. ಬೋಗಿಯ ಕಿಟಕಿಗಳಿಂದ ಬೆಳಕು ಹೊರಬರುವುದನ್ನು ನಾನು ನೋಡಿದೆ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ.
ಆಕಾಶದಲ್ಲಿ ನಿಗೂಢ ದೀಪಗಳ ವಿಡಿಯೋ ಇಲ್ಲಿವೆ ವೀಕ್ಷಿಸಿ
https://twitter.com/KaustuvaRGupta/status/1569387803305455621