ಕೊರೊನಾ ಮೂರನೇ ಅಲೆಯ ಭೀತಿಯ ನಡುವೆಯೇ ಕೊಡಗಿನ ಕುಶಾಲನಗರ ತಾಲೂಕಿನ ಮುಳ್ಳುಸೋಗೆ ಎಂಬ ಗ್ರಾಮದಲ್ಲಿ ಮಕ್ಕಳಲ್ಲಿ ವಿಚಿತ್ರ ರೀತಿಯ ಜ್ವರ ಕಾಣಿಸಿಕೊಂಡಿದೆ. ಪೋಷಕರು ಮಕ್ಕಳನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿ ತಪಾಸಣೆ ನಡೆಸಿದ ವೇಳೆ ಇದು ಡೆಂಗ್ಯೂ, ಚಿಕುನ್ ಗುನ್ಯಾ ಅಥವಾ ಕೋವಿಡ್ ಯಾವುದೂ ಅಲ್ಲ ಎಂಬುದು ತಿಳಿದಿದೆ. ಹೀಗಾಗಿ ಇದೇನು ಹೊಸ ಕಾಯಿಲೆಯೋ ಎಂದು ಪೋಷಕರು ಆತಂಕಕ್ಕೀಡಾಗಿದ್ದಾರೆ.
ಮುಳ್ಳುಸೋಗೆ ಗ್ರಾಮದ ಜನತಾ ಕಾಲೋನಿ ಚಿಕ್ಕ ಮಕ್ಕಳಲ್ಲಿ ಮೊದಲು ಈ ಜ್ವರ ಕಾಣಿಸಿಕೊಂಡಿದೆ. ಜ್ವರ ತೀವ್ರವಾದಂತೆಲ್ಲ ಮಕ್ಕಳಲ್ಲಿ ತುರಿಕೆ ಶುರುವಾಗಿದೆ. ಅನೇಕ ಮಕ್ಕಳು ತುರಿಕೆಯ ಜೊತೆ ವಾಂತಿಯ ಲಕ್ಷಣವನ್ನೂ ಹೊಂದಿದ್ದಾರೆ .ಯಾವುದೋ ಸೊಳ್ಳೆ ಕಡಿತದಿಂದ ಈ ಜ್ವರ ಬಂದಿರಬಹುದು ಎಂದು ಪೋಷಕರು ಶಂಕೆ ವ್ಯಕ್ತಪಡಿಸಿದ್ದಾರೆ.
ಈ ವಿಚಿತ್ರ ಜ್ವರದಿಂದ ಬಳಲುತ್ತಿರುವ ಮಕ್ಕಳನ್ನು ಮೈಸೂರಿನ ಖಾಸಗಿ ಆಸ್ಪತ್ರೆಗಳಿಗೆ ದಾಖಲು ಮಾಡಲಾಗಿದೆ. ಆರೋಗ್ಯ ಇಲಾಖೆ ಅಧಿಕಾರಿಗಳು ಗ್ರಾಮಕ್ಕೆ ಭೇಟಿ ನೀಡಿದ್ದು ತಪಾಸಣೆ ಮುಂದುವರಿಸಿದ್ದಾರೆ. ಈ ನಡುವೆ ಕೊಡಗು ಡಿಹೆಚ್ಓಆರ್. ವೆಂಕಟೇಶ್ ಮಕ್ಕಳಿಗೆ ಹೊರ ಜಿಲ್ಲೆಯ ಆಸ್ಪತ್ರೆಗಳಿಗೆ ಕಳುಹಿಸದೇ ಕುಶಾಲ ನಗರದಲ್ಲಿಯೇ ಚಿಕಿತ್ಸೆ ನೀಡುವಂತೆ ಸೂಚನೆ ನೀಡಿದ್ದಾರೆ.