ಸಮುದ್ರದ ಒಡಲಾಳದಲ್ಲಿ ಸಾಕಷ್ಟು ವಿಸ್ಮಯಗಳಿವೆ. ಅದನ್ನು ಅಗೆದಷ್ಟೂ ಸಾಲದು ಎಂಬಂತಹ ಕೌತುಕಗಳನ್ನು ಸಮುದ್ರವು ಹೊಂದಿದೆ. ಈ ಮಾತಿಗೆ ಸಾಕ್ಷಿ ಎಂಬಂತೆ ಇದೀಗ ಆಸ್ಟ್ರೇಲಿಯಾದ ಸಮುದ್ರವೊಂದರಲ್ಲಿ ಅತ್ಯಂತ ವಿಚಿತ್ರವಾದ ವಸ್ತುವೊಂದು ಪತ್ತೆಯಾಗಿದೆ.
ಕಂದು ಬಣ್ಣದ ಜೆಲ್ಲಿ ಮಾದರಿಯ ಜೀವಿಯೊಂದು ಯೆಪ್ಪೊನೊನ್ನ ಕೆಂಪ್ ಬೀಚ್ನಲ್ಲಿ ಕಂಡು ಬಂದಿದೆ. ಇದನ್ನು ನೋಡಿದ ನೆಟ್ಟಿಗರು ಆಶ್ಚರ್ಯ ವ್ಯಕ್ತಪಡಿಸುತ್ತಿದ್ದಾರೆ.
ಕನ್ಯಾಪೂಜೆ ಮಾಡಿ ಮಕ್ಕಳೊಂದಿಗೆ ನವರಾತ್ರಿ ಸಂಭ್ರಮ ಹಂಚಿಕೊಂಡ ಶಿಲ್ಪಾ ಶೆಟ್ಟಿ
ಆಸ್ಟೇಲಿಯಾ ನೇಟಿವ್ ಆನಿಮಲ್ಸ್ ಎಂಬ ಹೆಸರಿನ ಫೇಸ್ಬುಕ್ ಪೇಜ್ನಲ್ಲಿ ಈ ಫೋಟೋವನ್ನು ಹಂಚಿಕೊಳ್ಳಲಾಗಿದೆ. ನನ್ನ ಸ್ನೇಹಿತೆ ತನ್ನ ಫೇಸ್ಬುಕ್ ಖಾತೆಯಲ್ಲಿ ಈ ಫೋಟೋವನ್ನು ಶೇರ್ ಮಾಡಿದ್ದಾಳೆ. ಯಾರಿಗಾದರೂ ಇದು ಏನೆಂದು ತಿಳಿದಿದೆಯೇ..? ಇದು ಜೆಲ್ಲಿ ರೀತಿಯಲ್ಲಿ ಇದೆ ಎಂದು ಆಕೆ ಹೇಳಿದ್ದಾಳೆ ಅಂತಾ ಶೀರ್ಷಿಕೆ ನೀಡಲಾಗಿದೆ.
ಈ ಫೋಟೋ ಪೋಸ್ಟ್ ಮಾಡುತ್ತಿದ್ದಂತೆಯೇ ಅನೇಕರು ತಮ್ಮದೇ ರೀತಿಯಲ್ಲಿ ವಿವರಣೆಗಳನ್ನು ಕಮೆಂಟ್ ಬಾಕ್ಸ್ನಲ್ಲಿ ನೀಡಿದ್ದಾರೆ. ಅನೇಕರು ಇದು ಜೆಲ್ಲಿ ಫಿಶ್ ಎಂದಿದ್ದಾರೆ. ಅಂದಹಾಗೆ ಇದನ್ನು ನೋಡಿ ನಿಮ್ಮ ತಲೆಯಲ್ಲಿ ಏನು ಹೊಳೆಯುತ್ತಿದೆ..?