alex Certify ಎಚ್ಚರ….! ಕೆನಡಾದಲ್ಲಿ ಹರಡ್ತಿದೆ ನಿಗೂಢ ಕಾಯಿಲೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಎಚ್ಚರ….! ಕೆನಡಾದಲ್ಲಿ ಹರಡ್ತಿದೆ ನಿಗೂಢ ಕಾಯಿಲೆ

mysterious brain disease came after COVID, patients see dead people in their  dreams | सावधान! कोरोना के बाद आई ये रहस्यमयी बीमारी, मरीज सपने में देखते  हैं मरे हुए लोग | Hindi News,

ಕೊರೊನಾ ಭೀಕರತೆ ಮಧ್ಯೆಯೇ ಕೆನಡಾದಲ್ಲಿ ನಿಗೂಢ ಮೆದುಳಿನ ಕಾಯಿಲೆ ಎಲ್ಲರನ್ನು ಭಯಗೊಳಿಸಿದೆ. ಇಲ್ಲಿಯವರೆಗೆ 48ಕ್ಕೂ ಹೆಚ್ಚು ಮಂದಿ ಈ ಕಾಯಿಲೆಗೆ ತುತ್ತಾಗಿದ್ದಾರೆ. ನಿದ್ರಾಹೀನತೆ, ಅಂಗಗಳ ಅಸ್ಥಿರತೆ, ಭಮ್ರೆ ಕಾಡುತ್ತದೆ. ಕೆನಡಾದ ನ್ಯೂ ಬ್ರನ್ಸ್ವಿಕ್ನಲ್ಲಿ ಅಟ್ಲಾಂಟಿಕ್ ಪ್ರಾಂತ್ಯದಲ್ಲಿ ಜನರು ಈ ಕಾಯಿಲೆಗೆ ತುತ್ತಾಗುತ್ತಿದ್ದಾರೆ.

ಈ ರೋಗದಿಂದ ಬಳಲುವ ಜನರಿಗೆ ಸತ್ತವರು ಕನಸಿನಲ್ಲಿ ಕಾಣ್ತಿದ್ದಾರಂತೆ. ಇದು ಜನರಲ್ಲಿ ಭಯ ಹುಟ್ಟಿಸಿದೆ. ಅಲ್ಲಿನ ವೈದ್ಯರು ರೋಗ ಪತ್ತೆಗೆ ಹಗಲಿರುಳು ಶ್ರಮಿಸುತ್ತಿದ್ದಾರೆ. ಕೆಲವರು ಇದಕ್ಕೆ ಕೊರೊನಾ ಲಸಿಕೆ ಕಾರಣವೆನ್ನುತ್ತಿದ್ದಾರೆ. ಆದ್ರೆ ಯಾವುದಕ್ಕೂ ಸ್ಪಷ್ಟ ಉತ್ತರ ಸಿಕ್ಕಿಲ್ಲ.

ಈ ರೋಗ ಕೊರೊನಾ ನಂತ್ರ ಕಾಣಿಸಿಕೊಂಡ ರೋಗವಲ್ಲ. ಇದು 6 ವರ್ಷಗಳ ಹಿಂದೆಯೇ ಕಾಣಿಸಿಕೊಳ್ಳಲು ಶುರುವಾಗಿದೆ. ಈಗಾಗಲೇ 6 ಮಂದಿ ಈ ರೋಗಕ್ಕೆ ಬಲಿಯಾಗಿದ್ದಾರೆ. ಕೊರೊನಾ ರೋಗ ಹೆಚ್ಚಾಗ್ತಿದ್ದಂತೆ ಅದ್ರ ಜೊತೆ ಈ ರೋಗದ ಮೇಲೆ ಜನರು ಹೆಚ್ಚು ಗಮನ ನೀಡಿದ್ದಾರೆ.

ವಿಜ್ಞಾನಿಗಳು ಈವರೆಗೂ ರೋಗದ ಹೆಸರನ್ನು ಪತ್ತೆ ಮಾಡಿಲ್ಲ. ರೋಗ ಪರಿಸರದ ಮೂಲಕ ಹರಡುತ್ತಿದೆಯಾ? ಅನುವಂಶಿಕವಾ? ಪ್ರಾಣಿಗಳಿಂದ ಹರಡುತ್ತಿದೆಯಾ ಎಂಬ ಪ್ರಶ್ನೆ ಮೂಡಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...