ಮೈಸೂರು: ವಾರದ ರಜೆ ದಿನವಾಗಿದ್ದರೂ ಮೈಸೂರಿನ ಚಾಮರಾಜೇಂದ್ರ ಮೃಗಾಲಯ ಓಪನ್ ಆಗಿದೆ. ಸಾಲು ಸಾಲು ರಜೆ ಹಿನ್ನೆಲೆಯಲ್ಲಿ ಪ್ರತಿ ದಿನ ಸಾವಿರಾರು ಸಂಖ್ಯೆಯಲ್ಲಿ ಪ್ರವಾಸಿಗರು ಆಗಮಿಸುತ್ತಿರುವುದರಿಂದ ಇಂದು ಮಂಗಳವಾರ ಮೃಗಾಲಯಕ್ಕೆ ವಾರದ ರಜೆ ರದ್ದು ಮಾಡಲಾಗಿದೆ.
ಪ್ರತಿ ಮಂಗಳವಾರ ಮೈಸೂರು ಮೃಗಾಲಯಕ್ಕೆ ವಾರದ ರಜೆ. ಆದರೆ ಈ ಬಾರಿ ಪ್ರವಾಸಿಗರ ಸಂಖ್ಯೆ ಹೆಚ್ಚಿರುವುದರಿಂದ ವಾರದ ರಜೆ ರದ್ದು ಮಡಲಾಗಿದೆ. ಎಂದಿನಂತೆ ಮೃಗಾಲಯ ತೆರೆದಿದೆ.
ಸಾಲು ಸಾಲು ರಜೆ ಇರುವುದರಿಂದ ಕಳೆದ ನಾಲ್ಕು ದಿನಗಳಿಂದ ಮೃಗಾಲಯಕ್ಕೆ ದಾಖಲೆ ಪ್ರಮಾಣದಲ್ಲಿ ಪ್ರವಾಸಿಗರು ಹರಿದುಬಂದಿದ್ದಾರೆ. ಬರೋಬ್ಬರಿ 1.01 ಲಕ್ಷ ಸಂದರ್ಶಕರು ಭೇಟಿ ನೀಡಿದ್ದಾರೆ. ಕಳೆದ ವರ್ಷ ಈ ದಿನದಲ್ಲಿ 77,833 ಜನರು ಮೃಗಾಲಯಕ್ಕೆ ಭೇಟಿ ನೀಡಿದ್ದರು.
ಡಿಸೆಂಬರ್ 25 ಕ್ರಿಸ್ ಮಸ್ ದಿನ 35,344 ಪ್ರವಾಸಿಗರು ಮೃಗಾಲಯಕ್ಕೆ ಭೇಟಿ ನೀಡಿದ್ದಾರೆ. ಶನಿವಾರದಿಂದ ಸೋಮವಾರದವರೆಗೆ ಒಟ್ಟು 1.01 ಲಕ್ಷ ಜನರು ಮೃಗಾಲಯಕ್ಕೆ ಭೇಟಿ ನೀಡಿದ್ದಾರೆ ಎಂದು ಮೃಗಾಲಯ ಕಾರ್ಯ ನಿರ್ವಾಹಕರು ಮಾಹಿತಿ ನೀಡಿದ್ದಾರೆ.