
ಮೈಸೂರು: ಕಾಡಿನಿಂದ ನಡಿಗೆ ಆಹಾರ ಅರಸುತ್ತ ಬಂದ ಕಡಾನೆಯೊಂದು ತಡೆಗೋಡೆ ಕಂಬಗಲ ನಡುವೆ ಸಿಲುಕಿ ಒದ್ದಾಡಿದ ಘಟನೆ ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶದ ವೀರನಹೊಸಳ್ಳಿಯ ಮದಗನೂರು ಕೆರೆಯಂಚಲ್ಲಿ ನಡೆದಿದೆ.
ಸುಮಾರು 30 ವರ್ಷದ ಕಾಡಾನೆಯೊಂದು ತಡೆಗೋಡೆ ಕಂಬಗಳ ನಡುವೆ ಸಿಲುಕಿಕೊಂಡಿದೆ. 2021ರಲ್ಲಿ ಈ ಆನೆಗೆ ನಾಗರಹೊಳೆ ಎಲಿಫೆಂಟ್ 1 ಎಂಬ ಹೆಸರಲ್ಲಿ ರೆಡಿಯೋ ಕಾಲರ್ ಅಳವಡಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಆನೆ ಯವ ಸ್ಥಳದಲ್ಲಿ ಸಿಲುಕುಕಿಕೊಂಡಿದೆ ಎಂಬುದನ್ನು ಪತ್ತೆಮಾಡುವುದು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಸುಲಭವಾಯಿತು.
ತಕ್ಷಣ ಡಿಸಿಎಫ್ ಸೀಮಾ, ಎಸಿಎಫ್ ಲಕ್ಷ್ಮೀಕಾಂತ್ ಹಾಗೂ ಸಿಬಂದಿಗಳು ಸ್ಥಳಕ್ಕಾಗಮಿಸಿ ಜೆಸಿಬಿ ಮೂಲಕ ತಡೆಗೋಡೆ ತೆರವು ಮಾಡಿ ಆನೆಯನ್ನು ರಕ್ಷಿಸಲಾಯಿತು.