alex Certify ಮೈಸೂರು ದುರಂತದ ಬಳಿಕ ವಿಶ್ವವಿದ್ಯಾಲಯದಿಂದ ವಿದ್ಯಾರ್ಥಿನಿಯರಿಗೆ ಹೊಸ ನಿರ್ಬಂಧ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮೈಸೂರು ದುರಂತದ ಬಳಿಕ ವಿಶ್ವವಿದ್ಯಾಲಯದಿಂದ ವಿದ್ಯಾರ್ಥಿನಿಯರಿಗೆ ಹೊಸ ನಿರ್ಬಂಧ…!

ಚಾಮುಂಡಿ ಬೆಟ್ಟದಲ್ಲಿ ನಡೆದ ಸಾಮೂಹಿಕ ಅತ್ಯಾಚಾರ ಘಟನೆಯು ಇಡೀ ಮೈಸೂರನ್ನೇ ಬೆಚ್ಚಿಬೀಳಿಸಿದೆ. ಈ ಪ್ರಕರಣ ಬೆಳಕಿಗೆ ಬಂದ ಕೆಲವೇ ದಿನಗಳ ಬಳಿಕ ಮೈಸೂರು ವಿಶ್ವ ವಿದ್ಯಾಲಯವು ವಿದ್ಯಾರ್ಥಿನಿಯರಿಗಾಗಿ ಹೊಸ ಸುತ್ತೋಲೆಯನ್ನು ಹೊರಡಿಸಿದೆ. ಇದರಲ್ಲಿ ಸಂಜೆ 6:30 ಬಳಿಕ ವಿದ್ಯಾರ್ಥಿನಿಯರಿಗೆ ಮಾನಸ ಗಂಗೋತ್ರಿಗೆ ತೆರಳಲು ನಿರ್ಬಂಧ ಹೇರಲಾಗಿದೆ. ಸಂಜೆ 6:30 ರ ಬಳಿಕ ಕುಕ್ಕರಹಳ್ಳಿ ಕೆರೆ ಆವರಣಕ್ಕೆ ತೆರಳುವುದಕ್ಕೂ ವಿದ್ಯಾರ್ಥಿನಿಯರಿಗೆ ನಿರ್ಬಂಧ ಹೇರಲಾಗಿದೆ.

ಪೊಲೀಸ್​ ಇಲಾಖೆ ಮೌಖಿಕ ನಿರ್ದೇಶನದ ಮೇರೆಗೆ ಸುತ್ತೋಲೆ ಹೊರಡಿಸಲಾಗಿದೆ ಎಂದು ವಿಶ್ವವಿದ್ಯಾಲಯವು ಹೇಳಿದೆ. ಹೆಚ್ಚುವರಿ ಭದ್ರತಾ ಸಿಬ್ಬಂದಿ ಪ್ರತಿದಿನ ಸಂಜೆ 6 ರಿಂದ ರಾತ್ರಿ 9 ಗಂಟೆಗೆ ಕ್ಯಾಂಪಸ್​ನಲ್ಲಿ ಗಸ್ತು ತಿರುಗುತ್ತಿದ್ದಾರೆ.

ಗೃಹ ಸಚಿವ ಅರಗ ಜ್ಞಾನೇಂದ್ರ ಅಷ್ಟೊತ್ತಲ್ಲಿ ವಿದ್ಯಾರ್ಥಿನಿ ನಿರ್ಜನ ಸ್ಥಳಕ್ಕೆ ತೆರಳದೇ ಇದ್ದರೆ ಈ ಅಪರಾಧ ಸಂಭವಿಸುತ್ತಿರಲಿಲ್ಲ ಎಂಬ ಶಾಕಿಂಗ್​ ಹೇಳಿಕೆಯ ಬೆನ್ನಲ್ಲೇ ವಿಶ್ವವಿದ್ಯಾಲಯವು ಈ ಸುತ್ತೋಲೆಯನ್ನು ಹೊರಡಿಸಿದೆ.

ಮಂಗಳವಾರ ಸಂಜೆ ಸುಮಾರು 7:30ರ ಸುಮಾರಿಗೆ ವಿದ್ಯಾರ್ಥಿನಿ ಹಾಗೂ ಆಕೆಯ ಸ್ನೇಹಿತ ನಿರ್ಜನ ಸ್ಥಳಕ್ಕೆ ತೆರಳಿದ್ದರು. ಅವರು ಆ ಹೊತ್ತಲ್ಲಿ ಅಲ್ಲಿಗೆ ಹೋಗಬಾರದಿತ್ತು. ಆದರೆ ಯಾರನ್ನೂ ಹೋಗದಂತೆ ನಾವು ತಡೆಯಲು ಸಾಧ್ಯವಿಲ್ಲ. ಅದೊಂದು ನಿರ್ಜನ ಪ್ರದೇಶ. ಸಾಮಾನ್ಯವಾಗಿ ಅಲ್ಲಿ ಯಾರೂ ಇರೋದಿಲ್ಲ ಎಂದು ಅರಗ ಜ್ಞಾನೇಂದ್ರ ವಿವಾದಾತ್ಮಕ ಹೇಳಿಕೆ ನೀಡಿದ್ದರು.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...