
ಮೈಸೂರು: ಮದುವೆಯಾಗಿದ್ದರೂ ಬೇರೊಬ್ಬಳ ಜೊತೆ ಅನೈತಿಕ ಸಂಬಂಧ ಹೊಂದಿದ್ದ ವ್ಯಕ್ತಿಯೊಬ್ಬ ಬರ್ಬರವಾಗಿ ಹತ್ಯೆಯಾಗಿರುವ ಘಟನೆ ಮೈಸೂರಿನಲ್ಲಿ ನಡೆದಿದೆ.
ಸೂರ್ಯ ಕೊಲೆಯಾಗಿರುವ ವ್ಯಕ್ತಿ. ಇನ್ ಸ್ಟಾ ಗ್ರಾಂ ನಲ್ಲಿ ಶ್ವೇತಾ ಎಂಬಾಕೆಯನ್ನು ಪರಿಚಯಿಸಿಕೊಂಡಿದ್ದ. ಇದರಿಂದ ಬೇಸತ್ತು ಪತ್ನಿ ಹಗೂ ತಾಯಿ ಮನೆ ಬಿಟ್ಟು ಹೋಗಿದ್ದರು. ಇತ್ತೀಚೆಗೆ ಇಬ್ಬರು ಜೊತೆಗಿರುವ ಫೋಟೋಗಳನ್ನು ಸ್ಟೇಟಸ್ ಗೆ ಹಾಕಿದ್ದ. ಕೆಲ ದಿನಗಳಿಂದ ಶ್ವೇತಾ ಹಣ ಹಾಗೂ ಆಸ್ತಿಗಾಗಿ ಪೀಡಿಸುತ್ತಿದ್ದಳು. ಹಣಕ್ಕೆ ಪೀಡಿಸುತ್ತಿರುವ ವಿಚಾರ ಕುಟುಂಬದವರಿಗೂ ಗೊತ್ತಾಗಿತ್ತು.
ನಿನ್ನೆ ರಾತ್ರಿ ಶ್ವೇತಾ ಜೊತೆ ತೋಟದಲ್ಲಿದ್ದ ಸೂರ್ಯ ಇಂದು ಬೆಳಗಾಗುವಷ್ಟರಲ್ಲಿ ಕೊಲೆಯಾಗಿದ್ದಾನೆ. ಶ್ವೇತಾಳೆ ಕೊಲೆ ಮಾಡಿದ್ದಾಳೆ ಎಂದು ಕುಉಂಬದವರು ಆರೋಪಿಸಿದ್ದಾರೆ. ಮೈಸೂರಿನ ಜಯಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.