
ಮೈಸೂರು: ಕಟ್ಟಡಕ್ಕೆ ಪೇಂಟ್ ಮಾಡುತ್ತಿದ್ದ ವೇಳೆ ಅವಘಡ ಸಂಭವಿಸಿದ್ದು, ವಿದ್ಯುತ್ ತಂತಿ ತಗುಲಿ ಇಬ್ಬರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಮೈಸೂರಿನಲ್ಲಿ ನಡೆದಿದೆ.
ಮೈಸೂರಿನ ರಾಘವೇಂದ್ರ ನಗರದಲ್ಲಿ ಕಟ್ಟಡವೊಂದರ ಪೇಂಟ್ ಮಾಡುತ್ತಿದ್ದ ವೇಳೆ ಹೈಟೆನ್ಷನ್ ವಿದ್ಯುತ್ ತಂತಿ ತಗುಲಿದ್ದು, ಕಾರ್ಮಿಕರಿಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ.
ಸಿದ್ದರಾಜು ಹಾಗೂ ಮನು ಗಾಯಾಳುಗಳು. ಸಿದ್ದರಾಜು ಎಂಬುವವರ ಸ್ಥಿತಿ ಚಿಂತಾಜನಗಕವಾಗಿದೆ. ಇಬ್ಬರನ್ನೂ ಆಸ್ಪತ್ರೆಗೆ ದಾಖಲಿಸಲಾಗಿದೆ. ನಜರ್ ಬಾದ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.