
ಮೈಸೂರು: ಮೈಸೂರು ದಸರಾ ಹಿನ್ನೆಲೆಯಲ್ಲಿ ವಿಶ್ವ ವಿಖ್ಯಾತ ಜಂಬೂ ಸವಾರಿಗೆ ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಭರ್ಜರಿ ತಯಾರಿ ನಡೆಸಲಾಗುತ್ತಿದೆ. ಗಜಪಡೆಗಳು ಜಂಬೂಸವಾರಿ ರಿಹರ್ಸಲ್ ನಲ್ಲಿ ತೊಡಗಿವೆ.
ಇಂದು ಗಜಪಡೆ, ಅಶ್ವಾರೋಹಿಗಳು ಸೇರಿದಂತೆ ವಿವಿಧ ತಾಲೀಮು ನಡೆಸಲಾಯಿತು. ಗಜಪಡೆಗೆ ಪುಷ್ಪಾರ್ಚನೆ ಮೂಲಕ ತಾಲೀಮು ಆರಂಭವಾಯಿತು. ಜಂಬೂ ಸವಾರಿ ರಿಹರ್ಸಲ್ ನಲ್ಲಿ ಗಜಪಡೆ, ಅಶ್ವಾರೋಹಿದಳ, ಪೊಲೀಸ್ ಬ್ಯಾಂಡ್, ಪೊಲೀಸ್ ತುಕಡಿಗಳು ಭಾಗಿಯಾದವು.
ಅಭಿಮನ್ಯುಗೆ ಡಿಸಿಎಫ್ ಸೌರಭ್ ಕುಮಾರ್, ಮೌಂಟೆಡ್ ಎಸ್ ಪಿ ಶೈಲೇಂದ್ರ, ಎಸಿಪಿ ಗಳಾದ ಚಂದ್ರಶೇಖರ್, ಸತೀಶ್, ಆರ್ ಎಫ್ ಒ ಸಂತೋಷ್ ಪುಷ್ಪಾರ್ಚನೆ ಮಾಡಿದರು. ಅರಮನೆಯಿಂದ ಬನ್ನಿಮಂಟಪದವರೆಗೆ ಅಂಬಾರಿ ತಾಲೀಮು ನಡೆಸಲಾಯಿತು.