alex Certify BIG NEWS: ಮಸೂರು ದಸರಾ: ಪ್ರಯಾಣಿಕರಿಗಾಗಿ ವಿಶೇಷ ರೈಲು ವ್ಯವಸ್ಥೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಮಸೂರು ದಸರಾ: ಪ್ರಯಾಣಿಕರಿಗಾಗಿ ವಿಶೇಷ ರೈಲು ವ್ಯವಸ್ಥೆ

ಬೆಂಗಳೂರು: ವಿಶ್ವ ವಿಖ್ಯಾತ ಮೈಸೂರು ದಸರಾ ಮಹೋತ್ಸವ ಹಿನ್ನೆಲೆಯಲ್ಲಿ ಪ್ರಯಾಣಿಕರ ಅನುಕೂಲಕ್ಕಾಗಿ ನೈಋತ್ಯ ರೈಲ್ವೆ ವಿಶೇಷ ರೈಲು ವ್ಯವಸ್ಥೆ ಕಲ್ಪಿಸಿದೆ.

ಮೈಸೂರು ದಸರಾ ವೀಕ್ಷಣೆಗಾಗಿ ಹೊರ ರಾಜ್ಯಗಳಿಂದಲೂ ಜನರು ಆಗಮಿಸುವುದರಿಂದ ಪ್ರಯಣಿಕರ ಸಂಖ್ಯೆ ಹೆಚ್ಚಾಗಲಿದೆ. ಈ ಹಿನ್ನೆಲೆಯಲ್ಲಿ ನಾಡಹಬ್ಬ ದಸರಾಗೆ ನೈಋತ್ಯ ರೈಲ್ವೆ ಮೈಸೂರು, ಕೆ ಎಸ್ ಆರ್ ಬೆಂಗಳೂರು, ಮೈಸೂರು ಹಾಗೂ ಚಾಮರಾಜನಗರಗಳ ನಡುವೆ ವಿಶೇಷ ರೈಲುಗಳನ್ನು ಓಡಿಸಲಿದೆ.

ಟ್ರೇನ್ ನಂ: 06279/06280 ಮೈಸೂರು-ಕೆ ಎಸ್ ಆರ್ ಬೆಂಗಲೂರು-ಮೈಸೂರು ಅನ್ ರಿಸರ್ವ್ಡ್ ಸ್ಪೆಷಲ್ ರೈಲು ಐಡು ಟ್ರಿಪ್ ಗಳನ್ನು ಮಾಡಲಿದೆ.
06279 ರೈಲು ಅಕ್ಟೋಬರ್ 20, 21, 22, 23 ಹಾಗೂ 24ರಂದು ರಾತ್ರಿ 11.15ಕ್ಕೆ ಮೈಸೂರಿನಿಂದ ಹೊರಟು ಬೆಳಿಗ್ಗೆ 2:30ಕ್ಕೆ ಕೆಎಸ್ ಆರ್ ಬೆಂಗಳೂರು ತಲುಪಲಿದೆ.

ರೈಲು ನಂ: 06280 ಕೆ ಎಸ್ ಆರ್ ಬೆಂಗಳೂರು-ಮೈಸೂರು ವಿಶೇಷ ರೈಲು ಅಕ್ಟೋಬರ್ 21, 22, 23, 24 ಮತ್ತು 25ರಂದು ಬೆಳಿಗ್ಗೆ 3 ಗಂಟೆಗೆ ಕೆ ಎಸ್ ಆರ್ ಬೆಂಗಳೂರಿನಿಂದ ಹೊರಟು ಬೆಳಿಗ್ಗೆ 6.15ಕ್ಕೆ ಮೈಸೂರು ತಲುಪಲಿದೆ.

ರೈಲು ನಂ: 06597/06598 ಮೈಸೂರು-ಕೆ ಎಸ್ ಆರ್ ಬೆಂಗಳೂರು-ಮೈಸೂರು ಸ್ಪೆಷಲ್ ಟ್ರೇನ್ 5 ಟ್ರಿಪ್ ಗಳನ್ನು ಮಾಡಲಿದೆ. ಅಕ್ಟೋಬರ್ 20ರಿಂದ 24ರವರೆಗೆ ಸಂಚರಿಸಲಿದೆ.
ರೈಲು ನಂ: 06281/06282 ಮೈಸೂರು-ಚಾಮರಾಜನಗರ-ಮೈಸೂರು ಅನ್ ರಿಸರ್ವ್ಡ್ ಸ್ಪೆಷಲ್ ಟ್ರೇನ್ ಹಾಗೂ ರೈಲು ನಂ: 06283/06283 ಚಾಮರಾಜನಗರ-ಮೈಸೂರು ಸ್ಪೆಷಲ್ ಟ್ರೇನ್ ಅಕ್ಟೋಬರ್ 25ರವರೆಗೆ ಸಂಚರಿಸಲಿದೆ.

 

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...