
ಮೈಸೂರು: ವಿಶ್ವ ವಿಖ್ಯಾತ ಮೈಸೂರು ದಸರಾ ಮಹೋತ್ಸವ ಹಿನ್ನೆಲೆಯಲ್ಲಿ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಮಾವುತರು ಹಾಗೂ ಕಾವಾಡಿಗರಿಗೆ ಉಪಹಾರ ಬಡಿಸಿದ್ದಾರೆ.
ದಸರಾ ಮಹೋತ್ವವ ಹಿನ್ನೆಲೆಯಲ್ಲಿ ದಸರಾ ಕೇಂದ್ರ ಬಿಂದು ಗಜಪಡೆಯ ಮಾವುತರು ಹಾಗೂ ಕಾವಾಡಿಗರಿಗೆ ಸಚಿವೆ ಶೋಭಾ ಕರಂದ್ಲಾಜೆ ಅರಮನೆ ಆವರಣದಲ್ಲಿ ಉಪಹಾರ ವ್ಯವಸ್ಥೆ ಮಾಡಿದ್ದರು.
ಸಿದ್ಧಗೊಂಡ ವಿಶೇಷ ಉಪಹಾರವನ್ನು ಮಾವುತರು ಮತ್ತು ಕಾವಾಡಿಗರಿಗೆ ಶೋಭಾ ಕರಂದ್ಲಾಜೆ ಸ್ವತಃ ಬಡಿಸಿದರು. ಈ ವೇಳೆ ಸಂಸದ ಪ್ರತಾಪ್ ಸಿಂಹ, ಸ್ಥಳೀಯ ಬಿಜೆಪಿ ಮುಖಂಡರು ಸಾಥ್ ನೀಡಿದರು.