alex Certify Mysore Dasara : ಅ.25 ರಂದು ಮೈಸೂರು ಜಿಲ್ಲೆಯ ಎಲ್ಲಾ ಶಾಲೆಗಳಿಗೆ ರಜೆ ಘೋಷಣೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

Mysore Dasara : ಅ.25 ರಂದು ಮೈಸೂರು ಜಿಲ್ಲೆಯ ಎಲ್ಲಾ ಶಾಲೆಗಳಿಗೆ ರಜೆ ಘೋಷಣೆ

ಮೈಸೂರು : ದಸರಾ ಹಿನ್ನೆಲೆ ಅ.25 ರಂದು ಹೆಚ್ಚಿನ ಜನಸಂದಣಿ ಇರುವುದರಿಂದ ಮೈಸೂರು ಜಿಲ್ಲೆಯ ಶಾಲೆಗಳಿಗೆ ರಜೆ ಘೋಷಣೆ ಮಾಡಿ ಉಪನಿರ್ದೇಶಕರು ಸುತ್ತೋಲೆ ಹೊರಡಿಸಿದ್ದಾರೆ.

ದಿನಾಂಕ: 24/10/2023 ರಂದು ಜಂಬುಸವಾರಿ ನಡೆಯಲಿದ್ದು ಹೆಚ್ಚಿನ ಜನಸಂಖ್ಯೆ ಇರುವುದರಿಂದ, ಹಾಗೂ ದಿನಾಂಕ: 25/10/2023 ರಂದು  ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಶಾಲೆಗೆ ಹಾಜರಾಗದ ಕಾರಣ, ಆ ದಿನವನ್ನು ದಸರಾ ಪ್ರಯುಕ್ತ ಒಂದು ದಿನ ವಿಶೇಷ ರಜೆ ಘೋಷಣೆ ಮಾಡುವಂತೆ ಮನವಿ ಸಲ್ಲಿಸಿರುತ್ತಾರೆ.

ಸದರಿಯವರ ಮನವಿಯನ್ವಯ ಮಾನ್ಯ ಜಿಲ್ಲಾಧಿಕಾರಿಗಳು, ಮೈಸೂರು ಜಿಲ್ಲೆ ಮೈಸೂರು ರವರ ಉಲ್ಲೇಖಿತ (3) ರ ಟಿಪ್ಪಣಿ ಆದೇಶದಂತೆ ದಿನಾಂಕ: 25/10/2023ರಂದು ಮೈಸೂರು ಜಿಲ್ಲೆಯ ಎಲ್ಲಾ ಸರ್ಕಾರಿ/ಅನುದಾನಿತ/ಅನುದಾನರಹಿತ ಶಾಲೆಗಳಿ ಗೆ ನಾಡಹಬ್ಬ ದಸರಾ-2023ರ ಪ್ರಯುಕ್ತ ಒಂದು ದಿನದ ವಿಶೇಷ ರಜೆ ಎಂದು ಘೋಷಿಸಿದೆ. ಹಾಗೂ ಸದರಿ ದಿನವನ್ನು ದಿನಾಂಕ: 04/11/2023ರ ಶನಿವಾರದಂದು ಪೂರ್ಣ ತರಗತಿ ನಡೆಸಿ ಸರಿದೂಗಿಸಿಕೊಳ್ಳುವಂತೆ ಸೂಚಿಸಿದೆ ಎಂದು ಸುತ್ತೋಲೆಯಲ್ಲಿ ತಿಳಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...