ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವಕ್ಕೆ ದಿನಗಣನೆ ಆರಂಭವಾಗಿದೆ. ಈಗಾಗಲೇ ಗಜಪದೆಗಳು ಮೈಸೂರಿನಲ್ಲಿ ಬೀಡುಬಿಟ್ಟಿದ್ದು, ಪರೇಡ್ ಮಾಡುತ್ತಿವೆ.
ಇಂದಿನಿಂದ ದಸರಾ ಆನೆಗಳಿಗೆ ಮೂಟೆ ಹೊರುವ ತಾಲೀಮು ನೀಡಲಾಗುತ್ತಿದೆ. ಆನೆಗಳಿಗೆ ತಾಲೀಮು ನೀಡುವ ಮೊದಲು ಕೋಡಿ ಸೋಮೇಶ್ವರ ದೇವಸ್ಥಾನದ ಮುಂದೆ ವಿಶೇಷ ಪೂಜೆ ನೆರವೇರಿಸಲಾಯಿತು. ಈ ವೇಳೆ ನಮ್ದಾ, ತೊಟ್ಟಿಲು, ಹಗ್ಗ ಹಾಗೂ ಮರಳು ಮೂಟೆಗಳಿಗೆ ಪೂಜೆ ಸಲ್ಲಿಸಲಾಯಿತು.
ಡಿಸಿಎಫ್ ಡಾ.ಪ್ರಭುಗೌಡ ನೇತೃತ್ವದಲ್ಲಿ ಗಜಪಡೆಯ ಕ್ಯಾಪ್ಟನ್ ಅಭಿಮನ್ಯು, ಲಕ್ಷ್ಮೀ, ವರಲಕ್ಷ್ಮೀ ಆನೆಗಳಿಗೂ ಇದೇ ವೇಳೆ ಪೂಜೆ ಸಲ್ಲಿಸಲಾಯಿತು. ಬಳಿಕ ಆನೆಗಳಿಗೆ ಮೂರು ಮರಳು ಮೂಟೆ ಹೊರಿಸುವ ತಾಲೀಮು ಆರಂಭವಾಗಿದೆ.