
ಪಶು ವೈದ್ಯರ ಸಲಹೆ ಮೇರೆಗೆ ಲಕ್ಷ್ಮಿ ಹಾಗೂ ಅದರ ಮರಿಯನ್ನು ಪ್ರತ್ಯೇಕವಾಗಿ ಇರಿಸಿದ್ದು, ಮುಂಜಾಗ್ರತ ಕ್ರಮವಾಗಿ ಸಾರ್ವಜನಿಕರ ಓಡಾಟವನ್ನು ಇಲ್ಲಿ ನಿಷೇಧಿಸಲಾಗಿದೆ. ವೈದ್ಯರು ಆನೆ ಮತ್ತು ಅದರ ಮರಿಯ ಆರೋಗ್ಯದ ಕುರಿತು ತೀವ್ರ ನಿಗಾ ಇರಿಸಿದ್ದು, ಎರಡೂ ಸುರಕ್ಷಿತವಾಗಿವೆ ಎಂದು ತಿಳಿಸಿದ್ದಾರೆ.
ಈ ಹಿಂದೆ ಆನೆ ಸರಳಾಗೆ ಮರಿ ಜನಿಸಿದ ವೇಳೆ ಅದಕ್ಕೆ ಚಾಮುಂಡಿ ಎಂದು ಹೆಸರಿಡಲಾಗಿದ್ದು, ಇದೀಗ ಜನಿಸಿರುವ ಲಕ್ಷ್ಮಿಯ ಮರಿಗೆ ಸೂಕ್ತ ಹೆಸರಿನ ತಲಾಶೆಯಲ್ಲಿ ಅರಣ್ಯ ಇಲಾಖೆಯವರು ಇದ್ದಾರೆ.
ಸೆಪ್ಟಂಬರ್ 26ರಿಂದ ದಸರಾ ಉತ್ಸವ ಆರಂಭವಾಗಲಿದ್ದು, ರಾಷ್ಟ್ರಪತಿ ದ್ರೌಪದಿ ಮುರ್ಮು ಉದ್ಘಾಟಿಸಲಿದ್ದಾರೆ. ಅಕ್ಟೋಬರ್ 5 ರಂದು ದಸರಾ ಸಂಭ್ರಮ ಅಂತ್ಯಗೊಳ್ಳಲಿದೆ.