
ಮೈಸೂರು: 8 ವರ್ಷದ ಬಾಲಕನೊಬ್ಬ ಟ್ರ್ಯಾಕ್ಟರ್ ಅದಿ ಸಿಲುಕಿ ಮ್ರಿತಪಟ್ಟಿರುವ ಹೃದಯವಿದ್ರಾವಕ ಘಟನೆ ಮೈಸೂರು ಜಿಲ್ಲೆಯ ನಂಜನಗೂಡು ತಾಲೂಕಿನ ದೇವರಸನಹಳ್ಳಿಯಲ್ಲಿ ನಡೆದಿದೆ.
ಭವಿಷ್ (8) ಮೃತ ಬಾಲಕ. ಬೇಸಿಗೆ ರಜೆ ಹಿನ್ನೆಲೆಯಲ್ಲಿ ತನ್ನ ತಾಯಿಯ ಜೊತೆ ಅಜ್ಜಿಯ ಮನೆಗೆಂದು ಬಾಲಕ ಬಂದಿದ್ದ. ಈ ವೇಳೆ ಬಾಲಕ ತನ್ನ ಮಾವನ ಜೊತೆ ಟ್ರ್ಯಾಕ್ಟರ್ ನಲ್ಲಿ ಜಮೀನಿಗೆ ಹೋಗಿದ್ದಾನೆ.
ಜಮೀನಿನಲ್ಲಿ ಉಳಿಮೆ ಮಾಡುತ್ತಿದ್ದ ವೇಳೆ ಆಕಸ್ಮಿಕವಾಗಿ ಟ್ರ್ಯಾಕ್ಟರ್ ರೋಟಾವೇಟರ್ ಗೆ ಸಿಲುಕಿದ ಬಾಲಕ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಟ್ರ್ಯಾಕ್ಟರ್ ಅಡಿ ಸಿಲುಕಿ ಬಾಲಕನ ದೇಹ ಛಿದ್ರ ಛಿದ್ರವಾಗಿದೆ.
ನಂಜನಗೂಡು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.