300 ಸಂಚಿಕೆ ಪೂರೈಸಿದ ಸಂತಸದಲ್ಲಿ ‘ಮೈನಾ’ ಧಾರವಾಹಿ 11-12-2024 10:36AM IST / No Comments / Posted In: Featured News, Live News, Entertainment ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ‘ಲಕ್ಷಣ’ ಧಾರವಾಹಿ ಮೂಲಕ ಎಲ್ಲರ ಮನೆ ಮಾತಾಗಿದ್ದ ವಿಜಯಲಕ್ಷ್ಮಿ ಇದೀಗ ಮೈನಾ ಧಾರಾವಾಹಿಯಿಂದ ತಮ್ಮ ಜನಪ್ರಿಯತೆಯನ್ನು ಇನ್ನಷ್ಟು ಹೆಚ್ಚಿಸಿಕೊಂಡಿದ್ದಾರೆ. ಉದಯ ವಾಹಿನಿಯಲ್ಲಿ ಪ್ರತಿ ದಿನ ರಾತ್ರಿ 9:00 ಗಂಟೆಗೆ ಪ್ರಸಾರವಾಗುವ ಮೈನಾ ಧಾರವಾಹಿ 300 ಸಂಚಿಕೆಗಳನ್ನು ಪೂರೈಸಿದ್ದು, ಉದಯ ವಾಹಿನಿ ತನ್ನ ಅಧಿಕೃತ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಅಪ್ಲೋಡ್ ಮಾಡುವ ಮೂಲಕ ವೀಕ್ಷಕರಿಗೆ ಧನ್ಯವಾದ ತಿಳಿಸಿದೆ. ಕೋಮಲ್ ಎಂಟರ್ಪ್ರೈಸಸ್ ಬ್ಯಾನರ್ ನಲ್ಲಿ ನಿರ್ಮಾಣವಾಗಿರುವ ಈ ಧಾರವಾಹಿಯಲ್ಲಿ ವಿಜಯಲಕ್ಷ್ಮಿ ಸೇರಿದಂತೆ ಟಿ.ಎಸ್. ನಾಗಾಭರಣ, ಸಚಿನ್, ಭವ್ಯಾ, ಮಾನಸಿ ಜೋಶಿ, ಅಂಜಲಿ, ಅಪೂರ್ವ, ಸಿದ್ದಾರ್ಥ್, ಸಾಗರ್, ಯಶಸ್ವಿನಿ, ಮಾಸ್ಟರ್ ಅರುಣ್, ಅನುಷಾ ಕುಮಾರಿ ಅಭಿನಯಿಸಿದ್ದಾರೆ. ಸಂತೋಷ್ ಗೌಡ ನಿರ್ದೇಶಿಸಿದ್ದು, ಮಣಿಕಾಂತ್ ಕದ್ರಿ ಸಂಗೀತ ಸಂಯೋಜನೆ ನೀಡಿದ್ದಾರೆ, ಪ್ರಕಾಶ್ ಕಾರಿಂಜ ಸಂಕಲನ ಹಾಗೂ ಜಗದೀಶ್ ವಾಲಿ ಮತ್ತು ದಯಾಕರ್ ಅವರ ಛಾಯಾಗ್ರಹಣವಿದೆ.