ಕಂಡಕಂಡಲ್ಲಿ ಪ್ಲಾಸ್ಟಿಕ್ ಬ್ಯಾಗ್, ಪ್ಯಾಕೆಟ್, ಕವರ್‍ಗಳನ್ನು ಎಸೆಯುವುದರಿಂದ ಪ್ರಕೃತಿಯಲ್ಲಿ ನಮ್ಮೊಂದಿಗೇ ವಾಸಿಸುವ ಹಕ್ಕು ಇರುವ ಇತರ ಜೀವಿಗಳಿಗೆ ಯಾವ ರೀತಿ ತೊಂದರೆ ಆಗುತ್ತಿದೆ ಎನ್ನುವುದನ್ನು ಮನದಟ್ಟು ಮಾಡಿಕೊಡುವ ವಿಡಿಯೊವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಮನೋಕಾಮನೆ ಈಡೇರಬೇಕಾದ್ರೆ ಶ್ರಾವಣ ಮಾಸದಲ್ಲಿ ಹೀಗೆ ಮಾಡಿ
ಸಣ್ಣ ಮೈನಾ ಹಕ್ಕಿಯೊಂದು ಅರಣ್ಯ ಭಾಗದಲ್ಲಿ ಸ್ಕ್ಯಾಕ್ಸ್ ಪ್ಯಾಕೆಟ್‍ನಲ್ಲಿ ಸಿಕ್ಕಿ ಹಾಕಿಕೊಂಡು, ಹೊರಬರಲಾಗದೆಯೇ ನರಳಾಡುತ್ತದೆ. ಕೊನೆಗೆ ಸ್ವಯಂಸೇವಕರೊಬ್ಬರು ಹಕ್ಕಿಯನ್ನು ಹೊರಕ್ಕೆ ತಂದು ಹಾರಾಡಲು ನೆರವಾಗುತ್ತಾರೆ. ಅಡಿಬರಹದ ಸಮೇತವಾಗಿ ಅಫ್ರೋಜ್ ಶಾ ಎನ್ನುವವರು ಈ ವಿಡಿಯೊವನ್ನು ಟ್ವಿಟರ್‍ನಲ್ಲಿ (@AfrozShah1) ಹಂಚಿಕೊಂಡಿದ್ದಾರೆ. ಮುಂಬಯಿ ಬಳಿ ಈ ಘಟನೆ ನಡೆದಿದೆ.