![](https://kannadadunia.com/wp-content/uploads/2024/10/karanika.png)
ಹೊಸಪೇಟೆ: ವಿಜಯನಗರ ಜಿಲ್ಲೆ ಹರಪನಹಳ್ಳಿ ಹೊರ ವಲಯದಲ್ಲಿ ಭಾರತ ಹುಣ್ಣಿಮೆ ದಿನ ನಡೆದ ದೊಡ್ಡ ಮೈಲಾರಲಿಂಗೇಶ್ವರ ಕಾರಣಿಕೋತ್ಸವದಲ್ಲಿ ಗೊರವಯ್ಯ ಕೋಟೆಪ್ಪ ಅವರು ಮುತ್ತಿನ ರಾಶಿಗೆ ಮಂಜು ಮುಸುಕಿತಲೆ ಪರಾಕ್ ಎಂದು ದೈವ ವಾಣಿ ನುಡಿದಿದ್ದಾರೆ.
ದೊಡ್ಡ ಮೈಲಾರಲಿಂಗೇಶ್ವರ ದೇವಾಲಯದ ಆವರಣದಲ್ಲಿ ನಡೆದ ಕಾರಣಿಕೋತ್ಸವದಲ್ಲಿ ಅಪಾರ ಸಂಖ್ಯೆಯ ಭಕ್ತರು ಜಯ ಘೋಷ ಮೊಳಗಿಸಿದ್ದಾರೆ. ಗೊರವಪ್ಪರು, ಭಕ್ತರ ಜಯ ಘೋಷ ಮೊಳಗುತ್ತಿದ್ದಂತೆ 9 ದಿನ ಉಪವಾಸ ವ್ರತ ಆಚರಿಸಿದ್ದ ಗೊರವಯ್ಯ ಕೋಟೆಪ್ಪ ಅವರನ್ನು ಪಾದಗಟ್ಟೆಯ ಮರಡಿಯಿಂದ ಮೆರವಣಿಗೆ ಮೂಲಕ ಕರೆತರಲಾಗಿದೆ.
ಸಂಜೆ ವೇಳೆಗೆ ಬಿಲ್ಲನ್ನೇರಿದ ಗೊರವಯ್ಯ ಸದ್ದಲೆ ಎನ್ನುತ್ತಿದ್ದಂತೆ ನಿಶಬ್ದ ವಾತಾವರಣ ಉಂಟಾಗಿದೆ. ಕೆಲವೇ ಕ್ಷಣಗಳಲ್ಲಿ ಅವರು ಮುತ್ತಿನ ರಾಶಿಗೆ ಮಂಜು ಮಸುಕಿತಲೆ ಪರಾಕ್ ಎಂದು ಕಾರಣಿಕ ನುಡಿದಿದ್ದಾರೆ.
ಪ್ರಸಕ್ತ ವರ್ಷದ ಮಳೆಗೆ ಸಮೃದ್ಧವಾಗಿ ಉತ್ತಮ ಫಸಲು ಬರುತ್ತದೆ. ಇಳುವರಿ ಕುಂಠಿತವಾಗಬಹುದು ಎಂದು ಕಾರಣಿಕವನ್ನು ಅರ್ಥೈಸಲಾಗಿದೆ.