
ಮ್ಯಾನ್ಮಾರ್‌ನಲ್ಲಿ ಸಂಭವಿಸಿದ 7.7 ತೀವ್ರತೆಯ ಭೂಕಂಪದ ನಂತರ ದೇಶದ ಮಿಲಿಟರಿ ನೇತೃತ್ವದ ಸರ್ಕಾರ ಶನಿವಾರ 1,644 ಜನರು ಸಾವನ್ನಪ್ಪಿದ್ದಾರೆ ಮತ್ತು 3,400 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ ಮತ್ತು 30 ಜನರು ಕಾಣೆಯಾಗಿದ್ದಾರೆ ಎಂದು ತಿಳಿಸಿದೆ.
ವಿವರವಾದ ಅಂಕಿಅಂಶಗಳನ್ನು ಇನ್ನೂ ಸಂಗ್ರಹಿಸಲಾಗುತ್ತಿದೆ ಎಂದು ಹೇಳಲಾಗಿದ್ದು, ಹಲವಾರು ಕಟ್ಟಡಗಳು ಕುಸಿದಿವೆ. ರಸ್ತೆಗಳು ಬಿರುಕು ಬಿಟ್ಟಿವೆ. ಇತರ ಹಾನಿ ಕೂಡ ಆಗಿದ್ದು, ರಕ್ಷಣಾ ಕಾರ್ಯಾಚರಣೆ ಮುಂದುವರೆದಿದೆ.
ಭೂಕಂಪವು ನೆರೆಯ ಥೈಲ್ಯಾಂಡ್ ಅನ್ನು ಸಹ ನಡುಗಿಸಿದ್ದು, ಕನಿಷ್ಠ ಹತ್ತು ಜನರು ಸಾವನ್ನಪ್ಪಿದ್ದಾರೆ.
ಶುಕ್ರವಾರ ಮಧ್ಯಾಹ್ನ ಭೂಕಂಪವು ಮ್ಯಾನ್ಮಾರ್‌ನ ಎರಡನೇ ಅತಿದೊಡ್ಡ ನಗರವಾದ ಮಂಡಲೇಯಿಂದ ಸ್ವಲ್ಪ ದೂರದಲ್ಲಿ ಕೇಂದ್ರಬಿಂದುವಾಗಿತ್ತು. ಸಾವು ಮತ್ತು ಗಾಯಾಳುಗಳ ಸಂಖ್ಯೆ ಹೆಚ್ಚಾಗುವ ನಿರೀಕ್ಷೆಯಿದೆ ಎಂದು ಮ್ಯಾನ್ಮಾರ್ ಮಿಲಿಟರಿ ಸರ್ಕಾರದ ಮುಖ್ಯಸ್ಥ, ಹಿರಿಯ ಜನರಲ್ ಮಿನ್ ಆಂಗ್ ಹ್ಲೈಂಗ್ ಹೇಳಿದ್ದಾರೆ.
ಮ್ಯಾನ್ಮಾರ್ ಮತ್ತು ಬ್ಯಾಂಕಾಕ್ ಎರಡರಲ್ಲೂ ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ; ಹಲವಾರು ಶವಗಳು ಮತ್ತು ಗಾಯಗೊಂಡ ಜನರನ್ನು ಅವಶೇಷಗಳಿಂದ ಹೊರತೆಗೆಯಲಾಗಿದೆ. ಬ್ಯಾಂಕಾಕ್‌ನ ಜನಪ್ರಿಯ ಚತುಚಕ್ ಮಾರುಕಟ್ಟೆಯ ಬಳಿ, ನಿರ್ಮಾಣ ಹಂತದಲ್ಲಿದ್ದ 33 ಅಂತಸ್ತಿನ ಕಟ್ಟಡ ಕುಸಿದಿದೆ.