ಹಚ್ಚೆ ಈಗಿನ ಪದ್ಧತಿಯಲ್ಲ. ಪುರಾತನ ಕಾಲದಿಂದಲೂ ಹಚ್ಚೆಯಿದೆ. ಆದ್ರೆ ಇತ್ತೀಚಿನ ದಿನಗಳಲ್ಲಿ ಹಚ್ಚೆ ಫ್ಯಾಷನ್ ಆಗಿದೆ. ಜನರು ವಿಭಿನ್ನ ಹಚ್ಚೆಗಳನ್ನು ಹಾಕಿಕೊಳ್ತಾರೆ. ಮ್ಯಾನ್ಮಾರ್‌ನ ಬುಡಕಟ್ಟು ಜನಾಂಗದ ಮಹಿಳೆಯರ ಮುಖದ ತುಂಬ ಹಚ್ಚೆಯಿದೆ. ಇದ್ರಲ್ಲಿ ಏನು ವಿಶೇಷ ಕೇಳಬೇಡಿ. ಇಲ್ಲಿ ಮುಖದ ತುಂಬ ಹಚ್ಚೆ ಹಾಕಲು ಅನೇಕ ಕಾರಣಗಳಿವೆ.
ಪಶ್ಚಿಮ ಮ್ಯಾನ್ಮಾರ್‌ನಲ್ಲಿರುವ ಚಿನ್ ರಾಜ್ಯದಲ್ಲಿ ಲೈ ತು ಚಿನ್ ಬುಡಕಟ್ಟಿನ ಮಹಿಳೆಯರು ಪ್ರಪಂಚದಾದ್ಯಂತ ಪ್ರಸಿದ್ಧರಾಗಿದ್ದಾರೆ. ಮಹಿಳೆಯರ ಮುಖದ ತುಂಬ ಹಚ್ಚೆಯಿದೆ. ಬರ್ಮಾದ ರಾಜ ಈ ಪ್ರದೇಶಕ್ಕೆ ಬಂದಿದ್ದನಂತೆ. ಅವನಿಗೆ ಇಲ್ಲಿನ ಮಹಿಳೆಯರು ಆಕರ್ಷಕವಾಗಿ ಕಂಡರಂತೆ. ಮಹಿಳೆಯೊಬ್ಬಳನ್ನು ಅಪಹರಿಸಿದ್ದನಂತೆ. ಈ ಘಟನೆಯಿಂದ ಚಿನ್ ಜನರು ಭಯಭೀತರಾಗಿ ಮುಖಕ್ಕೆ ಹಚ್ಚೆ ಹಾಕಲು ಶುರು ಮಾಡಿದ್ದರಂತೆ.
ಇನ್ನೊಂದು ನಂಬಿಕೆ ಪ್ರಕಾರ, ಮಹಿಳೆಯರು ಸುಂದರವಾಗಿ ಕಾಣಲಿ ಎಂಬ ಕಾರಣವಾದ್ರೆ ಮತ್ತೊಂದು ಬೇರೆ ಬೇರೆ ಪಂಗಡಗಳ ಜನರು ಮುಂದೆ ಈ ಮಹಿಳೆಯರು ಭಿನ್ನವಾಗಿ ಕಾಣಲಿ ಎಂಬ ಕಾರಣಕ್ಕೆ ಹಚ್ಚೆ ರೂಢಿಗೆ ಬಂದಿತ್ತು. ಬ್ರಿಟಿಷ್ ಸಾಮ್ರಾಜ್ಯದ ಸ್ಥಾಪನೆಯ ನಂತರ, ಚಿನ್ ಅಲ್ಪಸಂಖ್ಯಾತರು ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರಗೊಂಡರು. ಆ ಕ್ರಿಶ್ಚಿಯನ್ನರು ಮಾತ್ರ ಮುಖದ ಮೇಲೆ ಹಚ್ಚೆ ಹಾಕಿಸಿಕೊಳ್ಳುತ್ತಾರೆ ಎಂಬ ಮಾತೂ ಇದೆ. ಆದ್ರೆ ಮುಖದ ಮೇಲೆ ಹಚ್ಚೆ ಹಾಕುವುದನ್ನು 1960ರ ದಶಕದಲ್ಲಿ ಬರ್ಮಾ ಸರ್ಕಾರ ನಿಷೇಧಿಸಿದೆ. ಅಲ್ಲಿಂದ ಈ ಜನಾಂಗದ ಮಹಿಳೆಯರು ಮುಖದ ಮೇಲೆ ಹಚ್ಚೆ ಹಾಕುವುದಿಲ್ಲ.