ಮಿಜೋರಾಂನ ಲೆಂಗ್ಪುಯಿ ವಿಮಾನ ನಿಲ್ದಾಣದ ಟರ್ಮಿನಲ್ ತಲುಪುವ ಮೊದಲು ಮ್ಯಾನ್ಮಾರ್ ಮಿಲಿಟರಿ ವಿಮಾನವು ರನ್ವೇಯಿಂದ ಜಾರಿದ ಪರಿಣಾಮ 6 ಮಂದಿ ಗಾಯಗೊಂಡಿದ್ದಾರೆ. ಇಂದು ಬೆಳಿಗ್ಗೆ 10.19 ರ ಸುಮಾರಿಗೆ ಈ ಘಟನೆ ನಡೆದಿದೆ.
ಮೂಲಗಳ ಪ್ರಕಾರ, ಮ್ಯಾನ್ಮಾರ್ ಸೇನೆ ಮತ್ತು ನಾಗರಿಕ ಸೇನೆಯ ನಡುವಿನ ಘರ್ಷಣೆಯಿಂದಾಗಿ ಲಾಂಗ್ಟಲೈ ಜಿಲ್ಲೆಯಿಂದ ಪಲಾಯನ ಮಾಡಿದ ಮ್ಯಾನ್ಮಾರ್ ಸೈನಿಕರನ್ನು ವಿಮಾನವು ಕರೆದೊಯ್ಯಬೇಕಿತ್ತು. ಮಿಜೋರಾಂನ ಲೆಂಗ್ಪುಯಿ ವಿಮಾನ ನಿಲ್ದಾಣದಲ್ಲಿ ಇಳಿದ ನಂತರ ವಿಮಾನವು ರನ್ ವೇಯಿಂ ಜಾರಿದೆ.