
ಕಾಲೇಜು ದಿನಗಳಲ್ಲಿ ಪ್ರೀತಿ ಮಾಡುತ್ತಿದ್ದವರಾದ್ರೆ, ಅವರನ್ನೇ ಮದುವೆಯಾಗುವವರ ಸಂಖ್ಯೆ ಬೆರಳಣಿಕೆಯಷ್ಟೇ. ಹಲವಾರು ಕಾರಣಗಳಿಗಾಗಿ ಪ್ರೇಮಿಗಳು ಬೇರೆ-ಬೇರೆಯಾಗುತ್ತಾರೆ.
ಮನೆಯವರ ಒತ್ತಡಕ್ಕೆ ಮಣಿದೋ ಅಥವಾ ತಮ್ಮ ನಡುವಿನ ಜಗಳದಿಂದ, ಮೋಸ ಈ ರೀತಿ ದೂರ-ದೂರ ಆಗುತ್ತಾರೆ. ಬೇರೆಯಾದ ಪ್ರೇಮಿಗಳು ಆಕಸ್ಮಾತ್ತಾಗಿ ಹಲವು ವರ್ಷಗಳ ನಂತರ ಸಿಕ್ಕಾಗ ಹೇಗೆ ಪ್ರತಿಕ್ರಿಯಿಸಬಹುದು? ನೀವಾದ್ರೆ ಏನು ಮಾಡುತ್ತೀರಿ?
ಹೀಗ್ಯಾಕೆ ಕೇಳುತ್ತಿದ್ದಾರೆ ಅನ್ಕೊಂಡ್ರಾ? ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ವಿಡಿಯೋ ನೋಡಿದ್ರೆ ಖಂಡಿತಾ ನಿಮ್ಮ ಮನ ಕರಗದೆ ಇರಲಾರದು. ಹೌದು, 35 ವರ್ಷಗಳ ಹಿಂದೆ ಬೇರ್ಪಟ್ಟ ಇಬ್ಬರು ಪ್ರೇಮಿಗಳ ನಡುವಿನ ಮನಃಪೂರ್ವಕ ಸಂಭಾಷಣೆಯ ವಿಡಿಯೋವೊಂದು ಟ್ವಿಟರ್‌ನಲ್ಲಿ ವೈರಲ್ ಆಗಿದೆ. ಇಬ್ಬರೂ ಪರಸ್ಪರ ಬೇರೆ-ಬೇರೆಯಾದ್ರೂ ಯಾರನ್ನೂ ಮದುವೆಯಾಗಿಲ್ಲ. ಪ್ರೇಮಿಗಳ ಈ ಸಂಭಾಷಣೆ ಕಂಡು ನೆಟ್ಟಿಗರ ಮನಕರಗಿದೆ.
ಉದ್ಯಾನವನವೊಂದರ ಬೆಂಚಿನ ಮೇಲೆ ಕುಳಿತು ಮಾತುಕತೆ ನಡೆಸಿದ ಈ ಹಳೆ ಪ್ರೇಮಿಗಳು, ಮೊದಲಿನ ಜೀವನ, ಬೇರ್ಪಟ್ಟ ನಂತರದ ಜೀವನ, ಪ್ರೇಮ ಪತ್ರಗಳು ಸೇರಿದಂತೆ ಎಲ್ಲದರ ಬಗ್ಗೆ ಮುಕ್ತವಾಗಿ ಮಾತನಾಡಿದ್ದಾರೆ. ಬೇರ್ಪಟ್ಟ ನಂತರ ಇಬ್ಬರು ಕೂಡ ಯಾರನ್ನೂ ಮದುವೆಯಾಗಲಿಲ್ಲ. ಇಬ್ಬರೂ ಹಳೆಯ ನೆನಪುಗಳನ್ನು ಮೆಲುಕುಹಾಕುತ್ತಾ ಕಣ್ಣೀರಾಗಿದ್ದಾರೆ. ಈ ಭಾವನಾತ್ಮಕ ವಿಡಿಯೋ ಇದೀಗ ಟ್ವಿಟ್ಟರ್ ನಲ್ಲಿ ವೈರಲ್ ಆಗಿದೆ.