ಮೈಸೂರು : ಅಕ್ರಮವಾಗಿ ಮರ ಕಡಿದ ಆರೋಪದ ಹಿನ್ನೆಲೆ ಸಂಸದ ಪ್ರತಾಪ್ ಸಿಂಹ ಸಹೋದರ ವಿಕ್ರಂಸಿಂಹ ಅವರನ್ನು ಅರಣ್ಯ ಇಲಾಖೆ ಅಧಿಕಾರಿಗಳು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
ಈ ಕುರಿತು ಸಂಸದ ಪ್ರತಾಪ್ ಸಿಂಹ ಪ್ರತಿಕ್ರಿಯೆ ನೀಡಿದ್ದಾರೆ. ‘ ಎಫ್ ಐ ಆರ್’ ನಲ್ಲಿ ಹೆಸರು ಇಲ್ಲದಿದ್ರೂ ನನ್ನ ತಮ್ಮನನ್ನು ಬಂಧಿಸಿದ್ದಾರೆ, ಅಂದು ನನ್ನ ತೇಜೋವಧೆ ಮಾಡಿದ್ರಿ , ಈಗ ನನ್ನನ್ನು ಮುಗಿಸಲು ಯತ್ನಿಸುತ್ತೀದ್ದೀರಾ..? ನಮ್ಮ ಕುಟುಂಬವನ್ನು ಮುಗಿಸಲು ಹೊರಟಿದ್ದೀರಾ..? ಮನೆಯಲ್ಲಿ ವಯಸ್ಸಾದ ನನ್ನ ತಾಯಿ, ತಂಗಿ ಇದ್ದಾರೆ, ಅವರನ್ನೂ ಅರೆಸ್ಟ್ ಮಾಡಿ ಎಂದು ಸಂಸದ ಪ್ರತಾಪ್ ಸಿಂಹ ಭಾವುಕರಾಗಿದ್ದಾರೆ.
ಸಿದ್ದರಾಮಯ್ಯ ಸರ್ ಬ್ರಿಲಿಯಂಟ್ ಪೊಲಿಟಿಶಿಯನ್… ನಿಮ್ಮ ಮಗನನ್ನು ಎಂಪಿ ಮಾಡಲು ನನ್ನ ಮೇಲೆ ಆರೋಪ ಮಾಡಿದ್ದೀರಿ, ಎಫ್ ಐ ಆರ್’ ನಲ್ಲಿ ಹೆಸರು ಇಲ್ಲದಿದ್ರೂ ನನ್ನ ತಮ್ಮನನ್ನು ಬಂಧಿಸಿದ್ದೀರಿ..? ಎಂದು ಸಿಎಂ ಸಿದ್ದರಾಮಯ್ಯ ವಿರುದ್ಧ ಪ್ರತಾಪ್ ಸಿಂಹ ಆರೋಪ ಮಾಡಿದ್ದಾರೆ.