
ಲಾಸ್ ಏಂಜಲೀಸ್: ಖ್ಯಾತ ಪಾಪ್ ತಾರೆ ಲೇಡಿ ಗಾಗಾ ಅವರ ಎರಡು ಶ್ವಾನಗಳ ಸುಳಿವು ನೀಡಿದವರಿಗೆ 3.6 ಕೋಟಿ ರೂಪಾಯಿ ಬಹುಮಾನ ನೀಡಲಾಗುವುದು.
ಲೇಡಿ ಗಾಗಾ ಅವರು ಸಾಕಿದ್ದ ಫ್ರೆಂಚ್ ಬುಲ್ ಡಾಗ್ ತಳಿಯ ಎರಡು ನಾಯಿಗಳನ್ನು ಅಪಹರಿಸಲಾಗಿದೆ. ನಾಯಿಗಳನ್ನು ನೋಡಿಕೊಳ್ಳುತ್ತಿದ್ದ ಸಹಾಯಕನ ಮೇಲೆ ಫೈರಿಂಗ್ ಮಾಡಿದ ದುಷ್ಕರ್ಮಿಗಳು 2 ಶ್ವಾನಗಳನ್ನು ಅಪಹರಿಸಿದ್ದಾರೆ. ಇದರಿಂದ ಬೇಸರಗೊಂಡಿರುವ ಲೇಡಿ ಗಾಗಾ ಪೊಲೀಸರಿಗೆ ದೂರು ನೀಡಿದ್ದು, ತಮ್ಮ ಶ್ವಾನಗಳ ಬಗ್ಗೆ ಸುಳಿವು ನೀಡಿದರೆ 3.6 ಕೋಟಿ ರೂಪಾಯಿ ಬಹುಮಾನ ನೀಡುವುದಾಗಿ ತಿಳಿಸಿದ್ದಾರೆ.
ಲೇಡಿ ಗಾಗಾ ಅವರು ರೋಮ್ ನಲ್ಲಿ ಸಿನಿಮಾ ಶೂಟಿಂಗ್ ನಲ್ಲಿ ಭಾಗಿಯಾಗಿದ್ದಾರೆ. ಸಹಾಯಕ ಮೂರು ಶ್ವಾನಗಳನ್ನು ಬುಧವಾರ ರಾತ್ರಿ ವಾಕಿಂಗ್ ಗೆ ಕರೆದುಕೊಂಡು ಹೋಗುತ್ತಿದ್ದ ವೇಳೆ ದುಷ್ಕರ್ಮಿಗಳು ದಾಳಿ ಮಾಡಿದ್ದಾರೆ. ಈ ವೇಳೆ ಒಂದು ನಾಯಿ ತಪ್ಪಿಸಿಕೊಂಡಿದೆ. ಲಾಸ್ ಎಂಜಲೀಸ್ ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ಲೇಡಿ ಗಾಗಾ ಈ ಬಗ್ಗೆ ಮಾಹಿತಿ ನೀಡಿ ನನ್ನ ಹೃದಯ ಘಾಸಿಯಾಗಿದೆ. ಗನ್ ಪಾಯಿಂಟ್ ನಲ್ಲಿ ಕೋಜಿ ಮತ್ತು ಗುಸ್ತಾವ್ ಫ್ರೆಂಚ್ ಬುಲ್ ಡಾಗ್ ಶ್ವಾನಗಳನ್ನು ಅಪಹರಿಸಲಾಗಿದೆ. ಹುಡುಕಿಕೊಟ್ಟವರಿಗೆ ಅರ್ಧ ಮಿಲಿಯನ್ ಡಾಲರ್ ನೀಡುವುದಾಗಿ ತಿಳಿಸಿದ್ದಾರೆ.