ನಿಯಂತ್ರಣ ಮೀರಿ ಏರಿಕೆಯಾಗುತ್ತಿರುವ ಇಂಧನ ಬೆಲೆಗಳಿಗೆ ಏಳು ವರ್ಷಗಳ ಹಿಂದೆ ಅಧಿಕಾರದಿಂದ ಕೆಳಗಿಳಿದ ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರವನ್ನು ದೂರಿದ್ದಾರೆ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್.
“ಇಂಧನ ಬೆಲೆಗಳನ್ನು ಕಡಿಮೆ ಇಡಲು ಯುಪಿಎ ಕ್ರೆಡಿಟ್ ಪಡೆದುಕೊಂಡಿದೆ. ಆದರೆ ಈಗ ಯುಪಿಎ ಮಾಡಿದ ಎಡವಟ್ಟುಗಳಿಗೆ ಇಂದಿನ ಸರ್ಕಾರ ಬೆಲೆ ತೆರುತ್ತಿದೆ. 2012 ರಲ್ಲಿ 1.44 ಲಕ್ಷ ಕೋಟಿ ರೂಪಾಯಿಯ ತೈಲ ಬಾಂಡ್ ವಿತರಿಸಿದ ಯುಪಿಎ ಮಾಡಿದ ಕೆಲಸಕ್ಕೆ ನಾನು ರಿಲೀಫ್ ಕೊಡಲು ಸಾಧ್ಯವಿಲ್ಲ” ಎಂದು ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.
2014-15ರ ವಿತ್ತೀಯ ವರ್ಷದಲ್ಲಿ ತೈಲ ಬಾಂಡ್‌ಗಳ ಮೇಲೆ ಬಡ್ಡಿ ರೂಪದಲ್ಲೇ 10,255 ಕೋಟಿ ರೂಪಾಯಿ ಪಾವತಿ ಮಾಡಲಾಯಿತು ಎನ್ನುವ ನಿರ್ಮಲಾ ಸೀರಾತಾಮನ್, ಅಲ್ಲಿಂದ ಮುಂದಿನ ಆರು ವಿತ್ತೀಯ ವರ್ಷದ ಅವಧಿಯಲ್ಲಿ ಪ್ರತಿ ವರ್ಷವೂ ಕೇಂದ್ರ ಸರ್ಕಾರವು 9989.96 ಕೋಟಿ ರೂಪಾಯಿಗಳನ್ನು ಬಡ್ಡಿ ರೂಪದಲ್ಲೇ ತೆರುತ್ತಿದೆ ಎಂದಿದ್ದಾರೆ.
ಬುಮ್ರಾ – ಶಮಿರನ್ನು ಲಕ್ಷ್ಮಣ್ – ದ್ರಾವಿಡ್‌ಗೆ ಹೋಲಿಸಿದ ಸೆಹ್ವಾಗ್
ದೇಶಾದ್ಯಂತ ಬಹುತೇಕ ಎಲ್ಲಾ ರಾಜ್ಯಗಳಲ್ಲೂ ಪೆಟ್ರೋಲ್ ಬೆಲೆ ಲೀಟರ್‌ಗೆ 100 ರೂ. ಮೀರಿದೆ. ಆದರೂ ಸಹ ಈ ನಿಟ್ಟಿನಲ್ಲಿ ಯಾವುದೇ ಕ್ರಮ ತೆಗೆದುಕೊಳ್ಳಲು ನರೇಂದ್ರ ಮೋದಿ ಸರ್ಕಾರ ಮುಂದಾಗಿಲ್ಲ.
ಇಂಧನ ಬೆಲೆಯ 60%ಗಿಂತ ಹೆಚ್ಚಿನ ಮೊತ್ತವನ್ನು ಕೇಂದ್ರ ಹಾಗೂ ಆಯಾ ರಾಜ್ಯಗಳ ತೆರಿಗೆಗಳೇ ಆವರಿಸಿವೆ. 2020-21ರ ವಿತ್ತೀಯ ವರ್ಷದಲ್ಲಿ ಇಂಧನದ ಮೇಲಿನ ಸುಂಕದ ರೂಪದಲ್ಲಿ ಕೇಂದ್ರದ ಬೊಕ್ಕಸಕ್ಕೆ 3.72 ಲಕ್ಷ ಕೋಟಿ ರೂಪಾಯಿಗಳು ಸೇರಿವೆ.
ಇಂಧನ ಬೆಲೆಗಳನ್ನು ಜಿಎಸ್‌ಟಿ ಕೋಷ್ಟಕದಲ್ಲಿ ತರಲು ಕೇಂದ್ರ ಸರ್ಕಾರ ರಾಜ್ಯಗಳೊಂದಿಗೆ ಚರ್ಚೆಗೆ ಮುಕ್ತವಾಗಿದ್ದರೂ ಸಹ ರಾಜ್ಯ ಸರ್ಕಾರಗಳ ಸಮ್ಮತವಿಲ್ಲದೇ ಅದು ಸಧ್ಯವಿಲ್ಲ ಎಂದು ನಿರ್ಮಲಾ ಸೀತಾರಾಮನ್ ತಿಳಿಸಿದ್ದಾರೆ.