ಪ್ರಖ್ಯಾತ ಡಿಸೈನರ್ ಸಭ್ಯಸಾಚಿ ಮುಖರ್ಜಿ ಫ್ಯಾಶನ್ ಬ್ರಾಂಡ್ ಎಚ್&ಎಂ ಜೊತೆಗೆ ಕೈ ಜೋಡಿಸಿದ್ದು, ಹೊಸ ಫ್ಯಾಶನ್‌ವೇರ್ ಹೊರ ತಂದಿದ್ದಾರೆ.
ಲೆಹಂಗಾಗಳಿಂದ ಸೀರೆಗಳವರೆಗೂ ದೇಸೀ ವಸ್ತ್ರಗಳಿಗೆ ತಮ್ಮದೇ ಟಚ್ ಕೊಡಲು ಖ್ಯಾತರಾಗಿರುವ ಸಭ್ಯಸಾಚಿ ’ವಾಂಡರ್‌ಲಸ್ಟ್’ ಹೆಸರಿನ ಥೀಂನಲ್ಲಿ ಭಾರತದ ಆಧುನಿಕ ಹಾಗೂ ಕ್ಲಾಸಿಕ್ ವಸ್ತ್ರಗಳ ಕಲೆಕ್ಷನ್ ಹೊರತಂದಿದ್ದಾರೆ.
ಆದರೆ ಈ ಬಗ್ಗೆ ಇದ್ದ ದೊಡ್ಡ ನಿರೀಕ್ಷೆಗಳೆಲ್ಲಾ ಸಭ್ಯಸಾಚಿ ಎಚ್&ಎಂ ಡಿಸೈನ್‌ಗಳನ್ನು ಆನ್ಲೈನ್‌ನಲ್ಲಿ ಬಿಡುಗಡೆ ಮಾಡುತ್ತಲೇ ನೆಲಕಚ್ಚಿವೆ. ಈ ಡಿಸೈನ್‌ಗಳ ಮೇಲೆ ಸಖತ್ ಜೋಕ್ ಮಾಡಿರುವ ನೆಟ್ಟಿಗರು ಫನ್ನಿ ಮೀಮ್‌ಗಳು ಹಾಗೂ ಜೋಕ್‌ಗಳನ್ನು ಆನ್ಲೈನ್‌ನಲ್ಲಿ ಹಂಚಿಕೊಂಡಿದ್ದಾರೆ.
“1970ರ ದಶಕದಲ್ಲಿ ನನ್ನ ಅಜ್ಜಿಯ ಬಳಿಯೂ ಇಂಥದ್ದೇ ಸೀರೆ ಇತ್ತೆಂದೂ, ಅದನ್ನು ಖರೀದಿಸಲು ಆಕೆ ತನ್ನ ಕಿಡ್ನಿ ಮಾರಬೇಕಾಗಿ ಬಂದಿರಲಿಲ್ಲ ಎಂದು ನನಗೆ ಖಾತ್ರಿಯಿದೆ,” ಎಂದು ನೆಟ್ಟಿಗರಲ್ಲಿ ಒಬ್ಬರು ಹೇಳಿದ್ದಾರೆ.
ಜನವರಿಯಲ್ಲಿ ಜನಿಸಿದ್ದೀರಾ ಈ ಸುದ್ದಿಯನ್ನೊಮ್ಮೆ ಓದಿ….!
“ನಮ್ಮ ವಾಚ್‌ಮನ್ ಒಬ್ಬರ ಔಟ್‌ಫಿಟ್‌ಅನ್ನೇ ರೀಕ್ರಿಯೇಟ್ ಮಾಡಿದ ಸಭ್ಯಸಾಚಿ ಅದಕ್ಕೆ 6,499 ರೂಪಾಯಿ ನಿಗದಿ ಮಾಡಿದ್ದಾರೆ. ಮಿಶ್ರಾ ಜೀ ಸಹ ಸ್ಟೈಲ್ ಐಕಾನ್ ಆಗಿದ್ದರೋ ಗೊತ್ತಿಲ್ಲ,” ಎಂದು ಮತ್ತೊಬ್ಬ ನೆಟ್ಟಿಗ ಸರಿಯಾಗಿ ಕಾಲೆಳೆದಿದ್ದಾರೆ.
“ಅದು ಚುಕ್ಕಿಗಳಿರುವ ಹತ್ತಿಯ ಸೀರೆ. ಬಹುತೇಕ ಪ್ರತಿಯೊಬ್ಬ ಬೆಂಗಾಲಿ ಮಹಿಳೆ ಬಳಿ ಅರ್ಧ ಡಜ಼ನ್‌ನಷ್ಟು ಇರುತ್ತವೆ. ಪ್ರತಿ ಬಾರಿ ಒಗೆದಾಗಲೂ ಅವು ಮೃದುವಾಗುವ ಈ ಸೀರೆಗಳನ್ನು ನಂತರದಲ್ಲಿ ಕಂತುಗಳಲ್ಲಿ ಹೊಲೆಯಲಾಗುತ್ತದೆ ಅಥವಾ ಅಡುಗೆ ಮನೆಯಲ್ಲಿ ಒರೆಸಲು ಇಡಲಾಗುತ್ತದೆ,” ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ.
“ನನ್ನ ಅಜ್ಜಿಯ ಬಳಿ ಇದೇ ಸೀರೆಯಿದ್ದು ಅದು 400 ರೂಪಾಯಿಗೆ ಸಿಗುತ್ತದೆ,” ಎಂದು ಟ್ವೀಟ್ ಒಂದು ಹೇಳಿದರೆ, “ಆ ಚಪ್ಪಲಿಗಳಿಗೆ ಖಂಡಿತವಾಗಿಯೂ 3-4 ಲೀಟರ್ ರಕ್ತ ಕೊಡಬೇಕಾಗುತ್ತದೆ,” ಎಂದು ಮತ್ತೊಬ್ಬ ನೆಟ್ಟಿಗರು ಕಾಲೆಳೆದಿದ್ದಾರೆ.
https://twitter.com/currdfriedrice/status/1425090114879774720?ref_src=twsrc%5Etfw%7Ctwcamp%5Etweetembed%7Ctwterm%5E1425090114879774720%7Ctwgr%5E%7Ctwcon%5Es1_&ref_url=https%3A%2F%2Fwww.timesnownews.com%2Fthe-buzz%2Farticle%2Fsabyasachi-hm-collection-sparks-meme-fest%2F798259