alex Certify ನನ್ನ ಧರಧರನೇ ಎಳೆದೊಯ್ದು ಠಾಣೆಯಲ್ಲಿ ಕೂರಿಸಿದ್ದರು : ನೆನಪು ಮೆಲುಕು ಹಾಕಿದ ಸಿಎಂ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ನನ್ನ ಧರಧರನೇ ಎಳೆದೊಯ್ದು ಠಾಣೆಯಲ್ಲಿ ಕೂರಿಸಿದ್ದರು : ನೆನಪು ಮೆಲುಕು ಹಾಕಿದ ಸಿಎಂ

ಬೆಂಗಳೂರು :  ತುರ್ತು ಪರಿಸ್ಥಿತಿ ವಿರೋಧಿಸಿ ಮೈಸೂರಿನಲ್ಲಿ ಪ್ರತಿಭಟನೆ ಮಾಡಿದ್ದೆ. ಆಗ ಪೊಲೀಸ್ ಇನ್ಸ್ ಪೆಕ್ಟರ್ ಒಬ್ಬ ನನ್ನ ಧರಧರನೆ ಎಳೆದೊಯ್ದು ಪೊಲೀಸ್ ಠಾಣೆಯಲ್ಲಿ ಕೂರಿಸಿದ್ದ ಎಂದು ಸಿಎಂ ಸಿದ್ದರಾಮಯ್ಯ ಅವರು ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ತಮ್ಮ ಹಳೆಯ ದಿನಗಳನ್ನು ಮೆಲಕು ಹಾಕಿದ್ದಾರೆ.

ಸೋಷಿಯಲ್ ಜಸ್ಟೀಸ್ ಫೌಂಡೇಶನ್ ಮೈಸೂರು ಇವರ ವತಿಯಿಂದ ಆಯೋಜಿಸಿದ್ದ ಡಾ. ಹರೀಶ್ ಕುಮಾರ್ ಅವರ “ಆಧುನಿಕ ಭಾರತದ ನಿರ್ಮಾತೃ ಡಾ. ಬಾಬು ಜಗಜೀವನರಾಮ್ ಮತ್ತು  ಬಾಬೂಜಿ ಚಿತ್ರ ಸಂಪುಟ” ಕೃತಿಯನ್ನು ಬಿಡುಗಡೆಗೊಳಿಸಿ, ಮಾತನಾಡಿದರು, ತುರ್ತು  ಪರಿಸ್ಥಿತಿಯ ಸಂದರ್ಭದಲ್ಲಿ ನಾನು ಜೈಲಿಗೆ ಹೋಗಬೇಕು ಅಂತಾ ವೀರ ವೇಷದಿಂದ ಹೋರಾಟಕ್ಕೆ ಹೋಗಿದ್ದೆ. ಈ ಗಿರಾಕಿಗಳು ನನ್ನ ಬೆಳಗ್ಗೆಯೆ ಪೊಲೀಸ್ ಠಾಣೆಯಿಂದ ಬಿಟ್ಟು ಕಳಿಸಿ ಬಿಟ್ಟರು ಎಂದು ಹೇಳಿದ್ದಾರೆ.

ಜಗಜೀವನ್ ರಾಂ ಅವರು ದೇಶ ಕಂಡ ಅಪ್ರತಿಮ ದೇಶಪ್ರೇಮಿ, ಮುತ್ಸದಿ  ರಾಜಕಾರಣಿ ಹಾಗೂ ಪ್ರಜಾಪ್ರಭುತ್ವವಾದಿ. ದೇಶಕ್ಕೆ ಸ್ವಾತಂತ್ರ್ಯ ಬರಬೇಕೆಂದು  ಹೋರಾಟ ಮಾಡಿದ ಎಲ್ಲರಿಗೂ ಈ  ಮುಂದೆ  ಎಂಥ ದೇಶ ನಿರ್ಮಾಣವಾಗಬೇಕೆಂಬ ಕನಸಿತ್ತು. ಇದಕ್ಕೆ ಪೂರಕವಾದ ಸಂವಿಧಾನದ ರಚನಾ ಸಮಿತಿ ಅಧ್ಯಕ್ಷರಾಗಿ ಸೂಕ್ತ ಸಂವಿಧಾನವನ್ನು ಬಾಬಾ ಸಾಹೇಬ್ ಅಂಬೇಡ್ಕರ್ ರಚನೆ ಮಾಡಿದ್ದಾರೆ.

 ಸಮಾಜದಲ್ಲಿ  ಹಸಿವು, ಬಡತನ, ನಿರುದ್ಯೋಗ, ದಾರಿದ್ರ್ಯ, ಅನಕ್ಷರತೆ ಎಲ್ಲವೂ ತೊಲಗಿ, ಸಮಾನ ಅವಕಾಶಗಳಿರುವ ಸಮಸಮಾಜ ನಿರ್ಮಾಣವಾಗಬೇಕು. ಅದಕ್ಕಾಗಿಯೇ ಪ್ರಯತ್ನ ಮಾಡಿದರು.

ಸಂವಿಧಾನವನ್ನು ದುರ್ಬಲಗೊಳಿಸುವ ಶಕ್ತಿಗಳ ವಿರುದ್ಧ ಹೋರಾಡಿ ಪ್ರಜಾಪ್ರಭುತ್ವ ಹಾಗೂ ಸಂವಿಧಾನವನ್ನು ರಕ್ಷಣೆ ಮಾಡುವುದೇ ಎಲ್ಲಾ ಮಹನೀಯರಿಗೆ ಸಲ್ಲಿಸುವ ಗೌರವ.

ಇತಿಹಾಸ ತಿರುಚಿರುವುದನ್ನು ನಾವು ನೋಡಿದ್ದೇವೆ. ಮುಂದೆ ಏನಾಗಬೇಕೆಬುದನ್ನು ಚರ್ಚಿಸುವುದು ಉತ್ತಮ. ಅಂಬೇಡ್ಕರ್, ಗಾಂಧಿ, ನೆಹರು, ಜಗಜೀವನ್ ರಾಂ ಅವರು ಹೇಳಿದಂಥ ಭಾರತ ನಿರ್ಮಾಣವಾಗಬೇಕು. ನಮಗೆ  ಅವಕಾಶ ಸಿಕ್ಕಿದಾಗ ಅಂಥ ಭಾರತ, ರಾಜ್ಯವನ್ನು ನಿರ್ಮಿಸಬೇಕು. ಆ ದಿಕ್ಕಿನಲ್ಲಿ ನಮ್ಮ ಸರ್ಕಾರ ಪ್ರಯತ್ನ ಮಾಡುತ್ತಿದೆ ಎಂದು ಹೇಳಿದರು.

ಎಲ್ಲಾ ಸರ್ಕಾರಗಳ ಉದ್ದೇಶ ಆದೇ ಆಗಬೇಕು ಸಂವಿಧಾನದ ಪೀಠಿಕೆಯಲ್ಲಿ ಹೇಳಿರುವುದೇ ಸಂವಿಧಾನದ ಉದ್ದೇಶ. ಅದನ್ನು ಜಾರಿ ಮಾಡುವ ಪ್ರಯತ್ನ ನಮ್ಮದು. ಅನೇಕ ಶಕ್ತಿಗಳು ಅದಕ್ಕೆ ವಿರುದ್ಧವಾಗಿವೆ. ಅಂಥ ಶಕ್ತಿಗಳನ್ನು ವಿರುದ್ಧ ಹೋರಾಡುವ ಮಾಡುವ ಮನೋಭಾವವನ್ನು ಬೆಳೆಸಿಕೊಳ್ಳಬೇಕು.   ಪಟ್ಟಭದ್ರ ಹಿತಾಸಕ್ತಿಗಳು ಹಿಂದೆಯೂ ಇದ್ದರು, ಈಗಲೂ ಇದ್ದಾರೆ. ಅವರನ್ನು ಗುರುತಿಸಿ ಅವರಿಗೆ ಶಕ್ತಿ ಬಾರದಂತೆ ನೋಡಿಕೊಳ್ಳುವ ಕೆಲಸವಾಗಬೇಕು ಎಂದರು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...