ಅರೆ ನಗ್ನ ಚಿತ್ರಗಳು ಹಾಗೂ ನೀಲಿಚಿತ್ರಗಳ ಶೂಟಿಂಗ್ ಸಾಮಾನ್ಯವಾದ ವಿಚಾರವೆಂದು ತನ್ನನ್ನು ನಂಬಿಸಿ ತಪ್ಪು ದಾರಿಗೆ ಎಳೆಯಲಾಗಿತ್ತು ಎಂದು ನಟಿ ಶೆರ್ಲಿನ್ ಚೋಪ್ರಾ ತಿಳಿಸಿದ್ದಾರೆ.
ನೀಲಿ ಚಿತ್ರಗಳ ನಿರ್ಮಾಣ ಸಂಬಂಧ ರಾಜ್ ಕುಂದ್ರಾ ವಿರುದ್ಧ ನಡೆಯುತ್ತಿರುವ ತನಿಖೆಯಲ್ಲಿ ಭಾಗಿಯಾಗಿರುವ ಶೆರ್ಲಿನ್ ತನ್ನ ಹೇಳಿಕೆಯನ್ನು ಮುಂಬಯಿ ಕ್ರೈಂ ಬ್ರಾಂಚ್ ತನಿಖಾಧಿಕಾರಿಗಳಿಗೆ ಕೊಟ್ಟಿದ್ದಾರೆ. ರಾಜ್ ಕುಂದ್ರಾ ನಡೆಸುತ್ತಿದ್ದ ಪಾರ್ನ್ ಅಪ್ಲಿಕೇಶನ್‌ಗಳಿಗೆ ತಾವು ಎಂದಿಗೂ ಹಾಟ್ ಸೀನ್‌ಗಳಲ್ಲಿ ನಟಿಸಿಲ್ಲ ಎಂದು ಚೋಪ್ರಾ ತಿಳಿಸಿದ್ದಾರೆ.
ಸಂಪುಟ ರಚನೆ, ಖಾತೆ ಹಂಚಿಕೆ ಬೆನ್ನಲ್ಲೇ ಭುಗಿಲೆದ್ದ ಅಸಮಾಧಾನ: ಕುತೂಹಲ ಮೂಡಿಸಿದ ರಹಸ್ಯ ಸಭೆ
“ನಾನು ಎಂದಿಗೂ ಕ್ಯಾಮೆರಾ ಮುಂದೆ ಲೈಂಗಿಕ ಕ್ರಿಯೆಯಲ್ಲಿ ಭಾಗಿಯಾಗಿಲ್ಲ. ಆದರೆ ಕಂಟೆಂಟ್‌ನ ಸಾಮಾಗ್ರಿ ದಿನೇ ದಿನೇ ಬೋಲ್ಡ್ ಆಗುತ್ತಲೇ ಸಾಗಿತ್ತು. ನನ್ನ ವಿಡಿಯೋಗಳನ್ನು ಶಿಲ್ಪಾ ಶೆಟ್ಟಿ ಹಾಗೂ ತಂಡ ಮೆಚ್ಚಿಕೊಂಡಿದೆ ಎಂದು ನನಗೆ ಹೇಳಲಾಗಿತ್ತು., ಶಿಲ್ಪಾ ಶೆಟ್ಟಿಯಂಥವರಿಂದ ನನ್ನ ಕೆಲಸದ ಬಗ್ಗೆ ಮೆಚ್ಚುಗೆ ವ್ಯಕ್ತವಾದಾಗ ನಿಮ್ಮ ಕೆಲಸ ಎಂಥದ್ದು ಎಂದು ಪ್ರಶ್ನೆ ಮಾಡಲು ಬರುವುದಿಲ್ಲ. ತಮ್ಮನ್ನು ದಾರಿ ತಪ್ಪಿಸಿ, ಮಾದಕ ದ್ರವ್ಯ ಕೊಟ್ಟು, ಮತ್ತು ಬರಿಸಿ ರೋಲಿಂಗ್ ಕ್ಯಾಮೆರಾದ ಮುಂದೆ ಲೈಂಗಿಕ ಕ್ರಿಯೆಯಲ್ಲಿ ಭಾಗಿಯಾಗುವಂತೆ ಮಾಡಲಾಯಿತು ಎನ್ನುವ ಮಂದಿಯ ಆಪಾದನೆಯನ್ನು ಅಲ್ಲಗಳೆಯುವಂತಿಲ್ಲ. ಮಾಡೆಲ್‌ಗಳಾಗುವ ಕನಸು ಕಾಣುತ್ತಿರುವ ಈ ಮಂದಿಗೆ ಬಾಲಿವುಡ್‌ನಲ್ಲಿ ಹೆಸರು ಮಾಡುವ ಆಸೆ ಹುಟ್ಟಿಸಿ ಹಾದಿ ತಪ್ಪಿಸಲಾಗುತ್ತಿದೆ,’’ ಎಂದು ಶೆರ್ಲಿನ್ ಹೇಳಿದ್ದಾರೆ.