ನವದೆಹಲಿ: ಬೇರೆ ಉದ್ದೇಶಗಳಿಗೆ ಆಧಾರ್ ನಂಬರ್ ಬಳಸುವಾಗ ಮುಂಜಾಗ್ರತೆ ವಹಿಸುವಂತೆ ಭಾರತೀಯ ವಿಶಿಷ್ಟ ಗುರುತಿನ ಚೀಟಿ ಪ್ರಾಧಿಕಾರ(UIDAI) ದೇಶದ ನಾಗರಿಕರಿಗೆ ಸೂಚನೆ ನೀಡಿದೆ.
ಸರ್ಕಾರದ ಸೌಲಭ್ಯ ಪಡೆಯುವ ಜೊತೆಗೆ ಬೇರೆ ಬೇರೆ ಸೇವೆ ಮತ್ತು ಸೌಕರ್ಯ ಪಡೆದುಕೊಳ್ಳಲು ನಾಗರೀಕರು ಆಧಾರ್ ಕಾರ್ಡ್ ಬಳಕೆ ಮಾಡುವಾಗ ಮುಂಜಾಗ್ರತೆ ವಹಿಸಬೇಕು ಎಂದು ಎಚ್ಚರಿಕೆ ನೀಡಲಾಗಿದೆ.
ಯಾವ ಉದ್ದೇಶಕ್ಕೆ ಆಧಾರ್ ಸಂಖ್ಯೆಯನ್ನು ಬಳಕೆ ಮಾಡಲಾಗುತ್ತದೆ ಎಂಬುದನ್ನು ಖಾತ್ರಿಪಡಿಸಿಕೊಳ್ಳಬೇಕು. ಬ್ಯಾಂಕ್ ಖಾತೆ, ಮೊಬೈಲ್ ನಂಬರ್, ಪಡಿತರ ಚೀಟಿ, ಪ್ಯಾನ್ ಕಾರ್ಡ್, ಪಾಸ್ಪೋರ್ಟ್ ನಂತಹ ದಾಖಲೆಗಳನ್ನು ಆಧಾರ್ ಕಾರ್ಡ್ ಜೊತೆಗೆ ನೀಡಬೇಡಿ ಎಂದು ಸೂಚನೆ ನೀಡಿದೆ.
ಆಧಾರ್ ಸಂಖ್ಯೆ ನೀಡಲು ವರ್ಚುವಲ್ ಐಡಿ ಸಂಖ್ಯೆ ಸೃಷ್ಟಿಸಿ ಆಧಾರ್ ಬಳಸಿಕೊಳ್ಳಬಹುದು. ಆ ವರ್ಚುಯಲ್ ಐಡಿಯನ್ನು ಆಧಾರ್ ವೆಬ್ಸೈಟ್ ಅಥವಾ ಮೈ ಆಧಾರ್ ಪೋರ್ಟಲ್ ನಲ್ಲಿ ಪಡೆದುಕೊಂಡು ನಿಮ್ಮ ಗುರುತಿನ ದೃಢೀಕರಣ ಮಾಡಬಹುದಾಗಿದೆ ಎಂದು ತಿಳಿಸಲಾಗಿದೆ.