ಬಾಯ್‌ಫ್ರೆಂಡ್ ಒಬ್ಬನ ವಿಚಾರವಾಗಿ ಮೂವರು ಯುವತಿಯರು ಹೊಡೆದಾಡುತ್ತಿರುವ ವಿಡಿಯೋವೊಂದು ಬಿಹಾರದ ಮುಜ಼ಫ್ಫರ್‌ಪುರದಲ್ಲಿ ರೆಕಾರ್ಡ್ ಆಗಿದ್ದು, ಆನ್ಲೈನ್‌ನಲ್ಲಿ ವೈರಲ್ ಆಗಿದೆ. ನಗರದ ಮಾಲ್ ಒಂದರಲ್ಲಿ ವಿಡಿಯೋ ಶೂಟ್ ಮಾಡಲಾಗಿದೆ.
ಒಬ್ಬ ಯುವಕನಿಗಾಗಿ ಮೂವರು ಹುಡುಗಿಯರು ಕಚ್ಚಾಡುತ್ತಿರುವುದನ್ನು ವಿಡಿಯೋದಲ್ಲಿ ನೋಡಬಹುದಾಗಿದೆ. ನೋಡು ನೋಡುತ್ತಲೇ ಗಲಾಟೆಯಲ್ಲಿ ನಾಲ್ಕನೇ ಹುಡುಗಿ ಸೇರಿಕೊಂಡು ಒಬ್ಬರ ಜುಟ್ಟು ಒಬ್ಬರು ಹಿಡಿದು ರಂಪಾಟ ಮಾಡುತ್ತಿರುವುದನ್ನು ಸಹ ಅಲ್ಲಿ ನೋಡಬಹುದಾಗಿದೆ.
ಹೆಣ್ಣು ಮಕ್ಕಳ ಶಿಕ್ಷಣದ ಬಗ್ಗೆ ಮಹತ್ವದ ಘೋಷಣೆ ಮಾಡಿದ ತಾಲಿಬಾನ್….!
ಹುಡುಗಿಯರ ಈ ಜಗಳ ನೋಡಲು ಜನರು ಸೇರಿದ್ದು, ಅವರ ಚಿತ್ರಗಳು ಹಾಗೂ ವಿಡಿಯೋಗಳನ್ನು ಸೆರೆ ಹಿಡಿದಿದ್ದಾರೆ.
ಇವರ ಈ ರಂಪಾಟದಿಂದ ಬೇಸತ್ತ ಮಾಲ್‌ನ ಸಿಬ್ಬಂದಿ ಚೆನ್ನಾಗಿ ಬೈದು ಹೊರಗೆ ಹೋಗುವಂತೆ ಆಗ್ರಹಿಸಿದ್ದಾರೆ. ಘಟನೆ ಸಂಬಂಧ ಯಾವುದೇ ದೂರು ದಾಖಲಾಗಿಲ್ಲ.
ಬಾಯ್‌ಫ್ರೆಂಡ್‌ಗಾಗಿ ನಾಲ್ಕು ಹುಡುಗಿಯರ ಫೈಟ್ ಮುಂದೇನಾಯಿತು, ಬಾಯ್ ಫ್ರೆಂಡ್ ಆಯ್ಕೆ ಯಾರಾಗಿತ್ತು? ಜಗಳ ಯಾವ ಹಂತ ತಲುಪಿತು ಎಂಬುದು ಗೊತ್ತಾಗಿಲ್ಲ.